ಕಾರು ಮರಕ್ಕೆ ಢಿಕ್ಕಿ : ನಿವೃತ್ತ ಬ್ಯಾಂಕ್ ನೌಕರ ಸಾವು
ಕುಂದಾಪುರ: ಕಾರೊಂದು ಮರಕ್ಕೆ ಡಿಕ್ಕಿಹೊಡೆದ ಪರಿಣಾಮ ಚಾಲಕ ಸಾವನ್ನಪ್ಪಿದ ದಾರುಣ ಘಟನೆ ಕೋಟೇಶ್ವರ – ಹಾಲಾಡಿ ರಸ್ತೆಯ ಕಾಳಾವರ ಗ್ರಾಮದ ಸಳ್ವಾಡಿ ನಡುಬೆಟ್ಟು ಕ್ರಾಸ್ಬಳಿ ಗುರುವಾರ ಸಂಭವಿಸಿದೆ. ಮೊಳಹಳ್ಳಿ ಗ್ರಾಮದ ಕುಂದ್ರಾಡಿ ನಿವಾಸಿ ವಿಜಯ ಬ್ಯಾಂಕ್ ನಿವೃತ್ತ ನೌಕರ ಶಂಕರ ಶೆಟ್ಟಿ(೬೩) ಸಾವನ್ನಪ್ಪಿದವರು. ಶಂಕರ್ ಶೆಟ್ಟಿ ತಮ್ಮ ಪತ್ನಿ ಹಾಗೂ ಇಬ್ಬರು ಸಂಬಂಧಿಕರೊಂದಿಗೆ ಸ್ಯಾಂಟ್ರೋ ಕಾರಿನಲ್ಲಿ ಪ್ರಯಾಣಿಸುತ್ತಿದ್ದಾಗ ಈ ದುರ್ಘಟನೆ ಸಂಭವಿಸಿದೆ. ಎದುರಿನಿಂದ ಬರುತ್ತಿದ್ದ ಬೈಕಿಗೆ ಢಿಕ್ಕಿಯಾಗುವುದನ್ನು ತಪ್ಪಿಸುವ ಭರದಲ್ಲಿ ಕಾರು ಮರಕ್ಕೆ ಢಿಕ್ಕಿಯಾಗಿದೆ.ಢಿಕ್ಕಿಯ ರಭಸಕ್ಕೆ […]