ಮಣಿಪಾಲ: ಕೆ.ಕೆ.ಹೆಬ್ಬಾರರ ಜನ್ಮದಿನದ ಅಂಗವಾಗಿ ಪ್ರಪ್ರಥಮ ಬಾರಿಗೆ ಹಿಂದಿ ಭಾಷೆಯಲ್ಲಿ ಯಕ್ಷಗಾನ ಪ್ರದರ್ಶನ
ಮಣಿಪಾಲ: ಭಾರತದ ಆಧುನಿಕ ಕಲಾವಿದರಲ್ಲಿ ಒಬ್ಬರಾದ ಕೆ.ಕೆ.ಹೆಬ್ಬಾರರ ಜನ್ಮದಿನದ ಅಂಗವಾಗಿ, ಹೆಬ್ಬಾರ್ ಗ್ಯಾಲರಿ ಮತ್ತು ಆರ್ಟ್ ಸೆಂಟರ್ (ಎಚ್ಜಿಎಸಿ) ಜೂನ್ 15 ರಂದು ಬುಧವಾರ ಸಂಜೆ 6 ಗಂಟೆಗೆ ಮಣಿಪಾಲ್ ಸೆಂಟರ್ ಫಾರ್ ಹ್ಯುಮಾನಿಟೀಸ್ ನ ಗಂಗೂಬಾಯಿ ಹಾನಗಲ್ ಸಭಾಂಗಣದಲ್ಲಿ ‘ಚಕ್ರವ್ಯೂಹ್’ ಯಕ್ಷಗಾನ ಪ್ರದರ್ಶನವನ್ನು ಆಯೋಜಿಸಿದೆ. ಉಡುಪಿಯ ಯಕ್ಷಗಾನ ಕೇಂದ್ರದ ಖ್ಯಾತ ಗುರು ಸಂಜೀವ್ ಸುವರ್ಣರವರು ಈ ಯಕ್ಷಗಾನವನ್ನು ನಿರ್ದೇಶಿಸಿದ್ದು, ಮಣಿಪಾಲದಲ್ಲಿ ಪ್ರಪ್ರಥಮ ಬಾರಿಗೆ ಹಿಂದಿ ಭಾಷೆಯಲ್ಲಿ ಬಯಲಾಟ ನಡೆಯಲಿದೆ. ಬಹುತೇಕ ಕನ್ನಡ ಅಥವಾ ತುಳು ಭಾಷೆಯಲ್ಲಿ […]