ಮಹಿಳಾ ಬೀದಿ ನಾಟಕ, ಸಂಗೀತ ಕಲಾ ತಂಡಗಳಿಂದ ಅರ್ಜಿ
ಉಡುಪಿ, ಮೇ 27: ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ವತಿಯಿಂದ ಉಡುಪಿ ಜಿಲ್ಲೆಯ ಗ್ರಾಮೀಣ ಪ್ರದೇಶದಲ್ಲಿ 2019-20 ನೇ ಸಾಲಿನಲ್ಲಿ ಸರ್ಕಾರದ ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳ ವಿಷಯಾಧಾರಿತ ಬೀದಿನಾಟಕ ಹಾಗೂ ಸಂಗೀತ ಕಾರ್ಯಕ್ರಮಗಳ ಪ್ರದರ್ಶಿಸಲು ಮಹಿಳಾ ಕಲಾ ತಂಡಗಳಿಂದ ಅರ್ಜಿ ಆಹ್ವಾನಿಸಿದೆ. ಅರ್ಜಿ ಸಲ್ಲಿಸುವ ಕಲಾ ತಂಡಗಳು ಬೀದಿ ನಾಟಕ ಪ್ರದರ್ಶನದಲ್ಲಿ ಅನುಭವ ಹೊಂದಿರಬೇಕು. ಅಭಿನಯ, ಹಾಡು, ಸಂಗೀತ, ನಿರೂಪಣೆ ಸಾಮಥ್ರ್ಯ ಹೊಂದಿರಬೇಕು. ಒಂದು ಬೀದಿ ನಾಟಕ ತಂಡದಲ್ಲಿ ಕಡ್ಡಾಯವಾಗಿ ಎಂಟು ಜನ ಮಹಿಳಾ ಕಲಾವಿದರಿರಬೇಕು. […]