ಪುತ್ತಿಗೆ ಪರ್ಯಾಯ ಸಂಭ್ರಮಕ್ಕೆ ಸಂದೀಪ್ ನಾರಾಯಣ್ ಸ್ವರಮಾಧುರ್ಯದ ಮೆರುಗು
ಉಡುಪಿ: ಪುತ್ತಿಗೆ ಪರ್ಯಾಯ ನಡೆಯುತ್ತಿರುವ ಸಂಭ್ರಮದ ಕ್ಷಣಗಳಿಗೆ ಕರ್ನಾಟಕ ಸಂಗೀತದ ಗಾನ ಮಾಧುರ್ಯದ ರಸದೌತಣ ನೀಡಲು ಜ. 19 ರಂದು ರಾಜಾಂಗಣದಲ್ಲಿ ಸಂಜೆ 7 ರಿಂದ ಸಂದೀಪ್ ನಾರಾಯಣ್ ಮತ್ತು ತಂಡದವರಿಂದ ಸಂಗೀತ ಕಛೇರಿ ನಡೆಯಲಿದೆ. ಮತ್ತೂರು ಶ್ರೀನಿಧಿ, ಕೆ.ಯು.ಜಯಚಂದ್ರ ರಾವ್, ಗಿರಿಧರ್ ಉಡುಪ ಸಾಥ್ ನೀಡಲಿದ್ದಾರೆ. ಎಲ್ಲರಿಗೂ ಉಚಿತ ಪ್ರವೇಶ