ಮರಳಿನಲ್ಲಿ ಮೂಡಿಬಂತು ದೈವಕಳೆ: ಸ್ಯಾಂಡ್ ಥೀಮ್ ತಂಡದಿಂದ ಕಾಂತಾರ ಶಿಲ್ಪಕಲೆ
ಕುಂದಾಪುರ: ಹರೀಶ್ ಸಾಗಾ, ಸಂತೋಷ ಭಟ್ ಹಾಲಾಡಿ, ಪ್ರಸಾದ್ ಆರ್ ಅವರ ‘ಸ್ಯಾಂಡ್ ಥೀಮ್’ ತಂಡವು ವರಾಹರೂಪಿ ಪಂಜುರ್ಲಿ ದೈವ ಮತ್ತು ಕಾಂತಾರದಲ್ಲಿ ಪಂಜುರ್ಲಿ ದೈವದ ರೂಪ ಧರಿಸಿದ ನಟ ರಿಷಬ್ ಶೆಟ್ಟಿಯವರನ್ನು ಕೇಂದ್ರವಾಗಿರಿಸಿ, 4.00 ಅಡಿ ಎತ್ತರದ ಮರಳು ಶಿಲ್ಪ ಕಲಾಕೃತಿಯನ್ನು ರಚಿಸಿ ಗಮನ ಸೆಳೆದಿದೆ. ಕೋಡಿ ಕುಂದಾಪುರ ಹಳೇ ಆಳಿವೆ ಬೀಚ್‌ನಲ್ಲಿ ಕಾಂತಾರ ಚಿತ್ರದ ಪಂಜುರ್ಲಿ ದೈವದ ಮರಳು ಶಿಲ್ಪವು ಜನರನ್ನು ಕೈ ಬೀಸಿ ಕರೆದಿದೆ ಮಾತ್ರವಲ್ಲ ಕಲಾವಿದರ ಕೈ ಚಳಕಕ್ಕೆ ತಲೆ ಬಾಗಿದೆ.