2 ವರ್ಷಗಳಲ್ಲೇ ಗರಿಷ್ಠ : ಒಂದೇ ದಿನದಲ್ಲಿ 7 ಲಕ್ಷ ವಹಿವಾಟು ದಾಖಲಿಸಿದ ಬಿಟ್​ ಕಾಯಿನ್​

ಸ್ಯಾನ್ ಫ್ರಾನ್ಸಿಸ್ಕೋ (ಅಮೆರಿಕ) : ಕಳೆದ ಒಂದು ವಾರದ ಅವಧಿಯಲ್ಲಿ ಬಿಟ್ ಕಾಯಿನ್ ವಹಿವಾಟು ಅಸಾಧಾರಣ ಪ್ರಮಾಣದಲ್ಲಿ ಏರಿಕೆ ಕಂಡಿದ್ದು, ಒಂದೇ ದಿನದಲ್ಲಿ 7,00,000 ಕ್ಕೂ ಹೆಚ್ಚು ವಹಿವಾಟುಗಳನ್ನು ದಾಖಲಿಸಿದೆ ಎಂದು ಹೊಸ ಅಂಕಿ ಅಂಶಗಳು ತೋರಿಸಿವೆ. ವಿಶ್ಲೇಷಣಾ ಸಂಸ್ಥೆ ಇನ್ ಟು ದಿ ಬ್ಲಾಕ್ ಪ್ರಸ್ತುತಪಡಿಸಿದ ಮಾಹಿತಿಯ ಪ್ರಕಾರ, ವರದಿಯಾದ ಬಿಟ್ ಕಾಯಿನ್ ವಹಿವಾಟುಗಳ ಸಂಖ್ಯೆ ಸುಮಾರು 7,03,000 ಕ್ಕೆ ಏರಿದೆ. ಇದು 2023 ರಲ್ಲಿ ದಾಖಲಾದ ಅತಿ ಹೆಚ್ಚಿನ ಸಂಖ್ಯೆಯ ವಹಿವಾಟು ಆಗಿದೆ. ಅಲ್ಲದೆ […]