ಮೂಡುಬೆಳ್ಳೆ: ಸುಸಜ್ಜಿತ ಸಮೃದ್ಧಿ ಡಿಜಿಟಲ್ ಕ್ಲಿನಿಕಲ್ ಲ್ಯಾಬೋರೇಟರಿ ಉದ್ಘಾಟನೆ
ಮೂಡುಬೆಳ್ಳೆ: ರಕ್ತ ಪರೀಕ್ಷೆಯೊಂದಿಗೆ ECG ಸೌಲಭ್ಯವಿರುವ ಸುಸಜ್ಜಿತ ಸಮೃದ್ಧಿ ಡಿಜಿಟಲ್ ಕ್ಲಿನಿಕಲ್ ಲ್ಯಾಬೋರೇಟರಿಯ ಉದ್ಘಾಟನಾ ಕಾರ್ಯಕ್ರಮವು ಜ.5 ರಂದು ನಡೆಯಿತು. ರಾಷ್ಟ್ರಪ್ರಶಸ್ತಿ ಪುರಸ್ಕ್ರತ ವಾಸ್ತು ತಜ್ಞ ಡಾ.ಬಸವರಾಜ್ ಶೆಟ್ಟಿಗಾರ್ ಕ್ಲಿನಿಕ್ ಅನ್ನು ಉದ್ಘಾಟಿಸಿ ಶುಭಹಾರೈಸಿದರು. ಮೂಡುಬೆಳ್ಳೆ ಸಂತ ಲಾರೆನ್ಸ್ ಚರ್ಚ್ ನ ಧರ್ಮ ಗುರು ರೆ.ಫಾ ಜಾರ್ಜ್ ಥೋಮಸ್ ಡಿಸೋಜ ಆಶೀರ್ವಚನ ನೀಡಿದರು. ಕೆನರಾ ಬ್ಯಾಂಕ್ ವ್ಯವಸ್ಥಾಪಕ ಡಾ. ಬೊಮ್ಮಯ್ಯ ಎಂ, ಡಾ ರವೀಂದ್ರ ಪೆರ್ಡೂರು, ಬೆಳ್ಳೆ ಗ್ರಾ.ಪಂ ಅಧ್ಯಕ್ಷೆ ದಿವ್ಯ ಆಚಾರ್ಯ ಉಪಸ್ಥಿತರಿದ್ದರು. ಸಮೃದ್ಧಿ ಡಿಜಿಟಲ್ […]