ಸಾಲಿಗ್ರಾಮ ಶ್ರೀ ಗುರುನರಸಿಂಹ ಮತ್ತು ಆಂಜನೇಯ ದೇವಸ್ಥಾನದಲ್ಲಿ ಮಧ್ಯವರ್ತಿಗಳನ್ನು ನೇಮಿಸಿಲ್ಲ: ಡಾ. ಕೆ.ಎಸ್. ಕಾರಂತ
ದೇಶದ ಹೆಸರಾಂತ ದೇವಸ್ಥಾನಗಳ ಸೇವೆಗಳನ್ನು ಅಂತರ್ಜಾಲದ ಮೂಲಕ ಒದಗಿಸುವ ಬಗ್ಗೆ ಅನೇಕ ಕೊಂಡಿಗಳು ಅಸ್ತಿತ್ವದಲ್ಲಿವೆ. ಅಂತಹ ಕೊಂಡಿಗಳು ತಮ್ಮ ಜಾಲದಲ್ಲಿ ಉಡುಪಿ ಜಿಲ್ಲೆಯ ಸಾಲಿಗ್ರಾಮದ ಶ್ರೀ ಗುರುನರಸಿಂಹ ಮತ್ತು ಆಂಜನೇಯ ದೇವಳಗಳನ್ನೂ ಹೆಸರಿಸಿ ಕಾರ್ಯಾಚರಿಸುತ್ತಿರುವುದು ನಮ್ಮ ಗಮನಕ್ಕೆ ಬಂದಿದೆ. ನಮ್ಮ ಆಡಳಿತಕ್ಕೆ ಒಳಪಟ್ಟಿರುವ ಉಭಯ ದೇವಳಗಳಿಗೂ ಇಂತಹ ಜಾಲತಾಣಗಳಿಗೂ ಯಾವುದೇ ಸಂಬಂಧವಿರುವುದಿಲ್ಲ. ಮಾತ್ರವಲ್ಲದೆ, ನಮ್ಮ ಆಡಳಿತ ಮಂಡಳಿಯು ಆನ್ ಲೈನ್ ಸೇವೆಗೆಂದು ಯಾವುದೇ ಮಧ್ಯವರ್ತಿ ವ್ಯಕ್ತಿಗಳನ್ನಾಗಲಿ, ಸಂಸ್ಥೆಗಳನ್ನಾಗಲಿ ನೇಮಿಸಿರುವುದಿಲ್ಲವೆಂದು ಈ ಮೂಲಕ ಸ್ಪಷ್ಟಪಡಿಸುತ್ತಿದ್ದೇವೆ. ಸಾರ್ವಜನಿಕ ಆಸ್ತಿಕ ಬಂಧುಗಳು […]