ಇಂದಿನಿಂದ ಮಲ್ಪೆ ಸೈಂಟ್ ಮೆರೀಸ್ ದ್ವೀಪ ಪ್ರವಾಸಿಗರಿಗೆ ಮುಕ್ತ
ಮಲ್ಪೆ: ಮಳೆಗಾಲದ ಹಿನ್ನೆಲೆಯಲ್ಲಿ ನಿಷೇಧ ಹೇರಲಾಗಿದ್ದ ಇಲ್ಲಿನ ಸೈಂಟ್ ಮೇರಿಸ್ ದ್ವೀಪಕ್ಕೆ ಪ್ರವಾಸಿ ಬೋಟ್ ಗಳ ಸಂಚಾರವನ್ನು ಇಂದಿನಿಂದ(ಅ.19) ಪ್ರಾರಂಭಿಸಲಾಗಿದೆ. ಇಲ್ಲಿನ ಸೀ-ವಾಕ್ ಪ್ರದೇಶದ ಬಳಿ 4 ದೋಣಿಗಳು ಎಲ್ಲ ರೀತಿಯ ಸುರಕ್ಷಾ ಸಲಕರಣೆಗಳೊಂದಿಗೆ ಸಜ್ಜಾಗಿ ಪ್ರವಾಸಿಗರ ಸೇವೆಗೆ ಲಭ್ಯವಿದೆ ಎಂದು ಬೋಟ್ ಗಳ ಮುಖ್ಯಸ್ಥ ಗಣೇಶ್ ಮಲ್ಪೆ ತಿಳಿಸಿದ್ದಾರೆ.
ಪ್ರವಾಸಿಗರನ್ನು ಕೈ ಬೀಸಿ ಕರೆಯುತ್ತಿದೆ ಮಲ್ಪೆ ಸೈಂಟ್ ಮೇರೀಸ್ ದ್ವೀಪ
ಉಡುಪಿ: ಮಲ್ಪೆಯ ಸೈಂಟ್ ಮೇರೀಸ್ ದ್ವೀಪ ಇದೀಗ ಪ್ರವಾಸಿಗರನ್ನು ತನ್ನತ್ತ ಕೈ ಬೀಸಿ ಕರೆಯುತ್ತಿದೆ. ಮಳೆಯ ಹಿನ್ನೆಲೆಯಲ್ಲಿ ಸೈಂಟ್ ಮೇರಿಸ್ ದ್ವೀಪಕ್ಕೆ ತಾತ್ಕಾಲಿಕವಾಗಿ ಪ್ರವಾಸಿಗರ ಪ್ರವೇಶವನ್ನು ಸ್ಥಗಿತಗೊಳಿಸಲಾಗಿತ್ತು. ಆದರೆ ಬುಧವಾರದಿಂದ ಮತ್ತೆ ಪ್ರವಾಸಿಗರ ಪ್ರವೇಶಕ್ಕೆ ಅನುಮತಿ ನೀಡಲಾಗಿದೆ. ಪ್ರವಾಸಿಗರಿಗಾಗಿ ವಿವಿಧ ಸೌಲಭ್ಯ ಮತ್ತು ಮುಂಜಾಗೃತಾ ಕ್ರಮ ಅಡಿಕೆ, ತೆಂಗಿನ ಮರದ ಎಲೆಗಳಿಂದ ಪ್ರವೇಶ ಮತ್ತು ನಿರ್ಗಮನ ದ್ವಾರಗಳನ್ನು ನಿರ್ಮಿಸಲಾಗಿದೆ. ಪ್ರವೇಶ ಶುಲ್ಕ ಪ್ರತೀ ವ್ಯಕ್ತಿಗೆ 300 ರೂ. ನಿಯಮಗಳ ಉಲ್ಲಂಘನೆ ಕಂಡು ಬಂದಲ್ಲಿ 500 ರೂ. ದಂಡ ವಿಧಿಸಲಾಗುತ್ತದೆ. […]