ಕನ್ನಡ-ತುಳು ಸಾಹಿತ್ಯ ವೇದಿಕೆಯ ವಾಟ್ಸ್ ಆ್ಯಪ್ ಬಳಗದ ಸಾಹಿತ್ಯ ಸಂಪದ ಕಾರ್ಯಕ್ರಮ

ಉಡುಪಿ: ಅಕ್ಟೋಬರ್‌ 30 ರಂದು ಕನ್ನಡ – ತುಳು ಸಾಹಿತ್ಯ ವೇದಿಕೆ ವಾಟ್ಸ್ ಆ್ಯಪ್ ಬಳಗ ಆಯೋಜಿಸಿದ್ದ ಮೊದಲ ಆಫ್‌ಲೈನ್ ಕಾರ್ಯಕ್ರಮವಾದ ‘ಸಾಹಿತ್ಯ ಸಂಪದ’ ಕಾರ್ಯಕ್ರಮವು ಯಕ್ಷಗಾನ ಕಲಾ ಕೇಂದ್ರ ಹಂಗಾರಕಟ್ಟೆ, ಗುಂಡ್ಮಿ ಇಲ್ಲಿ ಸರಳವಾಗಿ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮೊಗೇರಿ ಶೇಖರ ದೇವಾಡಿಗ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಕ.ಸಾ.ಪ ಬ್ರಹ್ಮಾವರ ತಾಲೂಕು ಘಟಕದ ಅಧ್ಯಕ್ಷ ರಾಮಚಂದ್ರ ಐತಾಳ್ ಗುಂಡ್ಮಿ, ಯಕ್ಷಗಾನ ಕಲಾ ಕೇಂದ್ರದ ಕಾರ್ಯದರ್ಶಿ ರಾಜಶೇಖರ ಹೆಬ್ಬಾರ್ ಮತ್ತು ಸಹೋದರ ಬಳಗ ಹೊಂಗಿರಣ ವೇದಿಕೆಯ ನಿರ್ವಾಹಕ […]