ಶಿರಸಿ: ಸಾಹಿತ್ಯ ಅಕಾಡೆಮಿ ಹೊಸದೆಹಲಿ ವತಿಯಿಂದ ಕಥಾಸಂಧಿ ಸಾಹಿತ್ಯ ಕಾರ್ಯಕ್ರಮ

ಶಿರಸಿ: ನಾನು ಕಾಲ್ಪನಿಕ ಕತೆಗಳನ್ನು ಬರೆಯುವುದಿಲ್ಲ. ನನ್ನ ಹೆಚ್ಚಿನ ಕತೆಗಳು ಸಮಾಜಿಕ ಅಸಮಾನತೆ, ಶೋಷಣೆಯ ಹಿನ್ನೆಲೆಯಲ್ಲೇ ಹುಟ್ಟಿಕೊಂಡಿವೆ. ನಾಗರಿಕ ಸಮಾಜದಲ್ಲಿ ಇಂದಿಗೂ ಅಸ್ಪೃಶ್ಯತೆಯ ಪಿಡುಗು ಚಾಲ್ತಿಯಲ್ಲಿರುವುದು ಶೋಚನೀಯ ಎಂದು ಕಥಾಕಾರ, ಗೋವಾ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಡಾ. ಪ್ರಕಾಶ್ ಪರ್ಯೆಂಕರ್ ಅಭಿಪ್ರಾಯಪಟ್ಟರು. ಅವರು ಸಾಹಿತ್ಯ ಅಕಾಡೆಮಿ, ಹೊಸದೆಹಲಿ ಶಿರಸಿಯ ನರೇಬೈಲ್‌ನಲ್ಲಿ ಚಂದನ ಪದವಿ ಪೂರ್ವ ಕಾಲೇಜಿನ ಸಹಭಾಗಿತ್ವದೊಂದಿಗೆ ಡಿ. 4 ರಂದು ಆಯೋಜಿಸಿದ್ದ ಕಥಾಸಂಧಿ ಮತ್ತು ಸಂವಾದ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು. ಗ್ರಾಮಾಂತರ ಪ್ರದೇಶಗಳಲ್ಲಿ ಈಗಲೂ ಚಾಲ್ತಿಯಲ್ಲಿರುವ ಅಸ್ಪೃಶ್ಯತೆ ಮತ್ತು […]

ಸಾಹಿತ್ಯ ಕಮ್ಮಟ ನಡೆಸಲು ಅರ್ಜಿ ಆಹ್ವಾನ

ಉಡುಪಿ, ಮೇ 05 (ಕವಾ): ಕರ್ನಾಟಕ ಸಾಹಿತ್ಯ ಅಕಾಡೆಮಿಯು ಪ್ರಸಕ್ತ ಸಾಲಿನ ಜುಲೈ ತಿಂಗಳಲ್ಲಿ ಸಂತ ಸಾಹಿತ್ಯ ಅಧ್ಯಯನ ಶಿಬಿರ ಎಂಬ ರಾಜ್ಯ ಮಟ್ಟದ 5 ದಿನಗಳ ಕಮ್ಮಟ ನಡೆಸಲು ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಮೇ 27 ಕೊನೆಯ ದಿನ. ಅರ್ಜಿ ನಮೂನೆ ಹಾಗೂ ಹೆಚ್ಚಿನ ಮಾಹಿತಿಗಾಗಿ ಅಕಾಡೆಮಿಯ ವೆಬ್‌ಸೈಟ್ http://sahithyaacademy.karnataka.gov.in ಅನ್ನು ಸಂಪರ್ಕಿಸುವಂತೆ ಅಕಾಡೆಮಿಯ ರಿಜಿಸ್ಟ್ರಾರ್, ಪ್ರಕಟಣೆಯಲ್ಲಿ ತಿಳಿಸಿದ್ದಾರೆ.