ಸಹಬಾಳ್ವೆ ಉಡುಪಿ ವತಿಯಿಂದ ಮಾ. 17ಕ್ಕೆ ಸರ್ವಜನೋತ್ಸವ ಸಮಾವೇಶ
ಉಡುಪಿ: ಸಹಬಾಳ್ವೆ ಉಡುಪಿ ಇದರ ಆಶ್ರಯದಲ್ಲಿ ಇದೇ 17ರಂದು ಕಲ್ಸಂಕ ರಾಯಲ್ಸ್ ಗಾರ್ಡನ್‌ನಲ್ಲಿ ‘ಸರ್ವಜನೋತ್ಸವ’ ಸಮಾವೇಶ ನಡೆಯಲಿದೆ ಎಂದು ಸಹಬಾಳ್ವೆಯ ಸಂಚಾಲಕ ಅಮೃತ್ ಶೆಣೈ ಹೇಳಿದರು. ಸಹಬಾಳ್ವೆಯ ಉಡುಪಿ ಕಚೇರಿಯಲ್ಲಿ ಶುಕ್ರವಾರ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸ್ವಾತಂತ್ರ್ಯ, ಸಮಾನತೆ ಮತ್ತು ಸಹೋದರತ್ವವನ್ನು ಎತ್ತಿಹಿಡಿಯುವುದು. ಸಂವಿಧಾನವನ್ನು ರಕ್ಷಣೆ ಮಾಡುವುದು. ಸರ್ವಧರ್ಮ ಸಮಭಾವ ಹಾಗೂ ಜಾತ್ಯತೀತ ಪರಂಪರೆಯನ್ನು ಉಳಿಸಿಕೊಳ್ಳುವುದು. ದೇಶದ ಏಕತೆಯನ್ನು ಗಟ್ಟಿಗೊಳಿಸುವುದು ಇದರ ಪ್ರಮುಖ ಉದ್ದೇಶವಾಗಿದೆ. ಸಮಾವೇಶದಲ್ಲಿ ಸುಮಾರು 20ರಿಂದ 25 ಸಾವಿರ ಜನರು ಭಾಗವಹಿಸುವ ನಿರೀಕ್ಷೆ ಇದೆ […]