ಶ್ರೀ ಭುವನೇಂದ್ರ ಪ.ಪೂ.ಕಾಲೇಜು: ಸದ್ಭಾವನಾ ದಿನಾಚರಣೆ
ಕಾರ್ಕಳ: ಶ್ರೀ ಭುವನೇಂದ್ರ ಪದವಿ ಪೂರ್ವ ಕಾಲೇಜಿನ ವತಿಯಿಂದ ಸದ್ಭಾವನಾ ದಿನಾಚರಣೆಯನ್ನು ನಡೆಸಲಾಯಿತು. ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ರಮೇಶ್ ಎಸ್.ಸಿ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಸೌಹಾರ್ದತೆ ಹಾಗೂ ಸದ್ಭಾವನೆಯ ಮಹತ್ವದ ಕುರಿತು ಮಾಹಿತಿ ನೀಡಿದರು. ಹಿಂದಿ ಉಪನ್ಯಾಸಕಿ ಮಾಲತಿ ಪ್ರಭು ಪ್ರಮಾಣ ವಚನ ಭೋದಿಸಿದರು. ರಾಜ್ಯಶಾಸ್ತ್ರ ಉಪನ್ಯಾಸಕಿ ಸುಮಾಲಿನಿ ಜೈನ್, ಉಪನ್ಯಾಸಕರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.