ಕಾರ್ಕಳ:ಎಸ್.ಕೆ.ಪಿ.ಎ ವಲಯದ 14ನೇ ವಾರ್ಷಿಕ ಮಹಾಸಭೆ
ಕಾರ್ಕಳ: ಬದುಕು ರೂಪಿಸುವ ವೃತ್ತಿಯ ಮುಖಾಂತರ ಛಾಯಾಗ್ರಹಣ ರಂಗಕ್ಕೆ ಇಳಿದ ಛಾಯಾಮಿತ್ರರು ನಿಸ್ವಾರ್ಥ ಸೇವೆಯಿಂದ ಸಂಘಟನೆಯಲ್ಲಿ ಸಕ್ರೀಯವಾಗಿ ತಮ್ಮನ್ನು ತಾವು ತೊಡಗಿಸಿಕೊಂಡು ಸಮಾಜಮುಖಿ ಕೆಲಸಗಳ ಮುಖಾಂತರ ಎಲ್ಲಾ ಸಂಘಟನೆಗಳಿಗೆ ಮಾದರಿಯಾಗಿದೆ ಎಂದು ಎಸ್.ಕೆ.ಪಿ.ಎ ಜಿಲ್ಲಾಧ್ಯಕ್ಷ ವಿಲ್ಸನ್ ಗೊನ್ಸಾಲ್ವೀಸ್ ಹೇಳಿದ್ದಾರೆ. ಅವರು ಎಸ್.ಕೆ.ಪಿ.ಎ ಕಾರ್ಕಳ ವಲಯದ 14ನೇ ವಾರ್ಷಿಕ ಮಹಾಸಭೆಯನ್ನು ಉದ್ಘಾಟಿಸಿ ಮಾತನಾಡಿದರು. ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಜಿಲ್ಲಾಸಂಚಾಲಕ ವಿಠ್ಠಲ್ ಚೌಟ ಮಾತನಾಡಿ, ಪ್ರತಿಯೊಬ್ಬ ಸದಸ್ಯರು ಸಂಘಟನೆಯ ಕಾರ್ಯಕ್ರಮದಲ್ಲಿ ಸಕ್ರೀಯವಾಗಿ ಭಾಗವಹಿಸುವುದರ ಮೂಲಕ ಸಂಘಟನೆಯನ್ನು ಬಲಪಡಿಸಬೇಕಾಗಿದೆ, ಸಂಘಟನೆ ಬಲಿಷ್ಟವಾದಾಗ […]