ಮಹಿಳೆಯರು ತಮ್ಮ ಹಕ್ಕುಗಳ ಬಗ್ಗೆ ತಿಳಿದುಕೊಂಡಿರಬೇಕು : ಡಾ.ವಿರೂಪಾಕ್ಷ ದೇವರಮನೆ

ಕಾರ್ಕಳ: ಮಹಿಳೆಯರು ಎಂದಿಗೂ ತಮ್ಮ ಹಕ್ಕುಗಳ ಬಗ್ಗೆ ತಿಳಿದುಕೊಂಡಿರಬೇಕು. ಒಬ್ಬ ಮಹಿಳೆಯ ಸಮಸ್ಯೆಯನ್ನು ಅರಿಯುವ ಶಕ್ತಿ ಇನ್ನೊಬ್ಬ ಮಹಿಳೆಗಿದೆ ಹಾಗಾಗಿ ಮಹಿಳಾ ಸಬಲೀಕರಣ ಘಟಕಗಳು ಮಹಿಳೆಯ ಸಮಸ್ಯೆ ಅರಿತುಕೊಳ್ಳುವಲ್ಲಿ ಬಹುದೊಡ್ಡ ಪಾತ್ರವಹಿಸಿದೆ. ಮಹಿಳೆಯರು ಎಲ್ಲಾ ಕ್ಷೇತ್ರಗಳಲ್ಲೂ ಮುಂದುವರೆದಿದ್ದರೂ ತಮ್ಮದೇ ಆದ ಸಮಸ್ಯೆಗಳಿಂದ ತೊಂದರೆ ಅನುಭವಿಸುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಸೂಕ್ತ ಮಾರ್ಗದರ್ಶನದ ಅವಶ್ಯಕತೆಯಿದೆ ಎಂದು ಉಡುಪಿಯ ಎ.ವಿ ಬಾಳಿಗ ಆಸ್ಪತ್ರೆಯ ಮನೋವೈದ್ಯ ವಿರೂಪಾಕ್ಷ ದೇವರಮನೆ ಹೇಳಿದರು. ಇವರು ಶ್ರೀ ಭುವನೇಂದ್ರ ಕಾಲೇಜಿನ ಮಹಿಳಾ ಸಬಲಿಕರಣ ಘಟಕ ಹಾಗೂ ಮಹಿಳಾ […]