ಕಾರ್ಕಳ: ಶ್ರೀ ಭುವನೇಂದ್ರ ಕಾಲೇಜಿನಲ್ಲಿ ಮಾನವಿಕ ಸಂಘ ಉದ್ಘಾಟನೆ
ಕಾರ್ಕಳ : ಮನುಷ್ಯನಾದವನಿಗೆ ಅವನದ್ದೇ ಆದ ಯೋಗ್ಯತೆಗಳಿವೆ, ಅವನಿಗೆ ಅವನದ್ದೇ ಶೈಲಿಯ ಜೀವನ ಪಾಠಗಳಿವೆ. ಸಮಾಜದಲ್ಲಿನ ರೂಪುರೇಷೆಯಲ್ಲೇ ಎಲ್ಲರನ್ನು ಅನುರಿಸಿ ಅವನು ಬೆಳೆದಿರುತ್ತಾನೆ. ಮಾನವ ಸಂಘ ಜೀವಿ ಹಾಗಾಗಿ ಸಹಬಾಳ್ವೆಯ ಜೀವನ ಅವನಿಗೆ ತಿಳಿದಿರಬೇಕು ಆಗ ಮಾತ್ರ ಸಮಾಜದಲ್ಲಿ ಎಲ್ಲರೊಂದಿಗೆ ಬೆರೆತು ಬಾಳಲು ಸಾಧ್ಯ. ಜೀವನ ಪಾಠವನ್ನು ಶಿಕ್ಷಣ ಕಲಿಸುವುದಿಲ್ಲ ನಮ್ಮ ಸುತ್ತಲಿನವರು ಕಲಿಸುತ್ತಾರೆ ಎಂದು ಕಾರ್ಕಳದ ಎಸ್.ವಿ.ಟಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ರಾಮ್‌ದಾಸ್ ಪ್ರಭು ಹೇಳಿದರು. ಅವರು ಶ್ರೀ ಭುವನೇಂದ್ರ ಕಾಲೇಜಿನಲ್ಲಿ ನಡೆದ ಪ್ರಸ್ತುತ […]