ರಷ್ಯಾ- ಯುಕ್ರೆನ್ ಯುದ್ಧ: ಯುಕ್ರೆನ್ ನಲ್ಲಿ ಸಿಲುಕಿರುವ ಮಂಗಳೂರಿನ ಇಬ್ಬರು ವಿದ್ಯಾರ್ಥಿಗಳು ಸೇರಿದಂತೆ ರಾಜ್ಯದ ಹತ್ತು ವಿದ್ಯಾರ್ಥಿಗಳು

ಮಂಗಳೂರು: ರಷ್ಯಾ- ಯುಕ್ರೆನ್ ಯುದ್ಧದಲ್ಲಿ ಮಂಗಳೂರಿನ ಇಬ್ಬರು ವಿದ್ಯಾರ್ಥಿಗಳು ಸೇರಿದಂತೆ ರಾಜ್ಯದ ಹತ್ತು ವಿದ್ಯಾರ್ಥಿಗಳು ಯುಕ್ರೇನ್ ನಲ್ಲಿ ಸಿಲುಕಿದ್ದಾರೆ. ದೇರೇಬೈಲ್ ನಿವಾಸಿ ಅನೈನಾ ಅನ್ನೋ ಅವರು ಉಕ್ರೇನ್‌ನಲ್ಲಿ ಸಿಲುಕಿಕೊಂಡಿದ್ದು, ಉಕ್ರೇನ್‌ನ ಖಾರ್ಕಿವ್ ನಗರದ ಗಡಿ ಭಾಗದಲ್ಲಿ ‌ನೆಲೆಸಿರೋ ಅನೈನಾ ಮಂಗಳೂರಿನಲ್ಲಿರೋ ತಾಯಿ ಸಂಧ್ಯಾ ಜೊತೆ ಫೋನ್ ಕರೆಯಲ್ಲಿ ಮಾತನಾಡಿದ್ದಾರೆ. ಮತ್ತೋರ್ವ ಮಂಗಳೂರು ಪಡೀಲು ನಿವಾಸಿ ಕ್ಲಾಟನ್ ಅವರು ಸದ್ಯಕ್ಕೆ ಯಾವುದೇ ರೀತಿ ತೊಂದರೆ ಇಲ್ಲ ಎಂಬ ಸಂದೇಶ ರವಾನೆ ಮಾಡಿದ್ದಾರೆ. ಶಿವಮೊಗ್ಗ ಬಾಗಲಕೋಟೆ, ಕೋಲಾರ,ಬೆಂಗಳೂರು, ಮೈಸೂರು, ಕಲಬುರಗಿ, […]