ಜೂನ್ 28 ರಂದು ರೋಟರಿ ಕ್ಲಬ್ ಮಣಿಪಾ ಲ್ ಜಿಲ್ಲಾ ಅಧಿಕಾರಿ ರೊಟೇರಿಯನ್ ಮೇಜರ್ ಡೋನರ್ ಡಾ. ಜಯಗೌರಿ ಅಧಿಕೃತ ಭೇಟಿ

ಮಣಿಪಾಲ: ರೋಟರಿ ಕ್ಲಬ್ ಮಣಿಪಾಲ (zone IV, RI District 3182) ಇದರ ಜಿಲ್ಲಾ ಅಧಿಕಾರಿ ರೊಟೇರಿಯನ್ ಮೇಜರ್ ಡೋನರ್ ಡಾ. ಜಯಗೌರಿ ಜಿಲ್ಲೆಗೆ ಅಧಿಕೃತ ಭೇಟಿ ನೀಡಲಿದ್ದು, ಜೂನ್ 28 ರಂದು ಸಂಜೆ 6 ಗಂಟೆಗೆ ಮಣಿಪಾಲ ಅನಂತನಗರದ ರೋಟರಿ ಭವನದಲ್ಲಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ರೊಟೇರಿಯನ್ ಪಿ.ಎಚ್.ಎಫ್ ರಾಮಚಂದ್ರ ಉಪಾಧ್ಯಾಯ ಹಾಗೂ ರೊಟೇರಿಯನ್ ರಾಜೇಶ್ ಡಿ.ಪಾಲನ್ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದು ರೋಟರಿ ಕ್ಲಬ್ ಅಧ್ಯಕ್ಷೆ ರೊಟೇರಿಯನ್ ರೇಣು ಜಯರಾಂ ತಿಳಿಸಿದ್ದಾರೆ.    

ಮಣಿಪಾಲ ರೋಟರಿ ವತಿಯಿಂದ 5 ಕ್ಷೇತ್ರಗಳ ಯೂತ್ ಐಕಾನ್ ಗಳ ಆಯ್ಕೆ

ಮಣಿಪಾಲ: ಮಣಿಪಾಲ ರೋಟರಿ 2022-23 ನೇ ಸಾಲಿನ ಕಾರ್ಯಕ್ರಮಗಳಲ್ಲಿ ಮುಖ್ಯವಾಗಿ ಮಕ್ಕಳಲ್ಲಿ ಕಲಿಕಾ ನ್ಯೂನತೆ ಪರಿಹಾರ, ಅಂಗಾಂಗ ದಾನ, ಜಲ ಯಾತ್ರೆ, ಮಹಿಳಾ ಸಬಲೀಕರಣ, ಇ-ತ್ಯಾಜ್ಯ ನಿರ್ವಹಣೆ ಈ ಮುಖ್ಯ ವಿಚಾರಗಳನ್ನು ಕೈಗೆತ್ತಿಕೊಂಡು ವಿವಿಧ ಸ್ಥರಗಳ ಕಾರ್ಯಕ್ರಮಗಳನ್ನು ವರ್ಷವಿಡೀ ಆಯೋಜಿಸಿದೆ. ಉಡುಪಿ ಜಿಲ್ಲೆಯ ವ್ಯಾಪ್ತಿಯಲ್ಲಿ ಈ ಮೇಲೆ ಹೇಳಿದ ಐದು ಕ್ಷೇತ್ರಗಳಲ್ಲಿ ಸುಸ್ಥಿರ ಅಭಿವೃದ್ಧಿಗೆ ಮತ್ತು ಇತರರಿಗೆ ಸ್ಪೂರ್ತಿದಾಯಕವಾಗಿ ಕೆಲಸ ಮಾಡಿದ 18 ರಿಂದ 30 ವಯೋಮಾನದ ಯೂತ್ ಐಕಾನ್ ಗಳನ್ನು ಗುರುತಿಸಿ ಇದೇ ತಿಂಗಳು 19 […]

ರೋಟರಿ ಮಣಿಪಾಲ: 22-23ನೇ ವರ್ಷದ ಹೊಸ ಪದಾಧಿಕಾರಿಗಳ ಪದಗ್ರಹಣ ಸಮಾರಂಭ

ಮಣಿಪಾಲ: ರೋಟರಿ ಮಣಿಪಾಲದ 22-23ನೇ ವರ್ಷದ ಹೊಸ ಪದಾಧಿಕಾರಿಗಳ ಪದಗ್ರಹಣ ಸಮಾರಂಭವು ಜುಲೈ 09, ಶನಿವಾರದಂದು ಸಂಜೆ 6 ಗಂಟೆಗೆ ಎಂಜಿಎಂ ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ನಡೆಯಲಿದೆ. ಸಾರ್ವಜನಿಕರು ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ಅಧ್ಯಕ್ಷೆ ರೇಣು ಜಯರಾಮ್, ಕಾರ್ಯದರ್ಶಿ ಶಶಿಕಲಾ ರಾಜವರ್ಮ ಮತ್ತು ಆರ್.ಸಿ.ಎಮ್ ತಂಡವು ತಿಳಿಸಿದೆ.