ಮಣಿಪಾಲ: ಸಂಚಾರ ನಿಯಮಗಳ ಬಗ್ಗೆ ಜಾಗೃತಿ ಮೂಡಿಸಲು ರೋಸ್ ಡೇ ಆಚರಣೆ

ಮಣಿಪಾಲ: ಜುಲೈ 16ರಂದು ಮಣಿಪಾಲ ಟೌನ್ ರೋಟರಿ, ಉಡುಪಿ ಪಾಲಿಟೆಕ್ನಿಕ್ ಇಂಟರಾಕ್ಟ್ ಕ್ಲಬ್, ಮಣಿಪಾಲ ಹಿಲ್ಸ್ ರೋಟರಿ ಮತ್ತು ಮಣಿಪಾಲ್ ಅಟೋ ಕ್ಲಬ್ ವತಿಯಿಂದ ಮಣಿಪಾಲ ಪೋಲೀಸ್ ಸ್ಟೇಷನ್ ಸಹಯೋಗದೊಂದಿಗೆ ರೆಡ್ ರೋಸ್ ಡೇ ಅನ್ನು ಆಚರಿಸಲಾಯಿತು. ಕ್ಲಬ್ ಅಧ್ಯಕ್ಷ ರೋ. ನಿತ್ಯಾನಂದ ನಾಯಕ್ ಮಾತನಾಡಿ, ರಸ್ತೆ ಅಪಘಾತಗಳು ಜಗತ್ತಿನಲ್ಲೇ ಅತ್ಯಂತ ಹೆಚ್ಚು ಪ್ರಾಣಹಾನಿಯನ್ನು ಉಂಟು ಮಾಡುತ್ತಿವೆ. ರಸ್ತೆ ನಿಯಮಗಳನ್ನು ಪಾಲಿಸದೇ ವಾಹನಗಳನ್ನು ಚಲಾಯಿಸುವುದು, ಅತಿ ವೇಗ, ಸೀಟ್ ಬೆಲ್ಟ್ ಮತ್ತು ಶಿರಸ್ತ್ರಾಣ ಧರಿಸದಿರುವುದು ಇದಕ್ಕೆ ಕಾರಣ. […]