ಅಕ್ರಮ ರೊಹಿಂಗ್ಯಾ ಮುಸ್ಲಿಂ ವಲಸಿಗರು ಭಾರತದಲ್ಲಿ ನೆಲೆಸಲು ಮೂಲಭೂತ ಹಕ್ಕನ್ನು ಹೊಂದಿಲ್ಲ: ಸುಪ್ರೀಂ ಕೋರ್ಟಿಗೆ ನಿಲುವು ತಿಳಿಸಿದ ಕೇಂದ್ರ ಸರ್ಕಾರ

ನವದೆಹಲಿ: ದೇಶದಲ್ಲಿ ಅಕ್ರಮ ರೊಹಿಂಗ್ಯಾ (Illegal Rohingyas) ಮುಸ್ಲಿಂ ವಲಸಿಗರ ಸ್ಥಿತಿಗತಿ ಕುರಿತು ಕೇಂದ್ರ ಸರ್ಕಾರ ಮಹತ್ವದ ಹೇಳಿಕೆ ನೀಡಿದೆ. ಅಕ್ರಮ ರೋಹಿಂಗ್ಯಾ ಮುಸ್ಲಿಂ ವಲಸಿಗರು ಭಾರತದಲ್ಲಿ ವಾಸಿಸಲು ಮತ್ತು ನೆಲೆಸಲು ಮೂಲಭೂತ ಹಕ್ಕನ್ನು ಹೊಂದಿಲ್ಲ ಎಂದು ಕೇಂದ್ರ ಸರ್ಕಾರ(Union Government) ಸುಪ್ರೀಂ ಕೋರ್ಟ್‌ಗೆ (Supreme Court) ತಿಳಿಸಿದೆ. ಕಾನೂನುಬಾಹಿರವಾಗಿ ದೇಶವನ್ನು ಪ್ರವೇಶಿಸುವವರಿಗೆ ನಿರಾಶ್ರಿತರ ಸ್ಥಾನಮಾನ ನೀಡಲು ನ್ಯಾಯಾಂಗವು ಪ್ರತ್ಯೇಕ ವರ್ಗವನ್ನು ರಚಿಸಲು ಸಾಧ್ಯವಿಲ್ಲ, ಸಂಸತ್ತು ಮತ್ತು ಕಾರ್ಯಾಂಗದ ನೀತಿ ನಿರ್ಧಾರಗಳನ್ನು ಅತಿಕ್ರಮಿಸಬಾರದು ಎಂದು ಅದು ಹೇಳಿದೆ. […]