ಅಪಘಾತ; ತಂದೆ ಮೃತ್ಯು-ಮಗಳು ಗಂಭೀರ

ಉಡುಪಿ: ರೋಡ್ ರೋಲರ್‌ಗೆ ಸ್ಕೂಟರ್ ಡಿಕ್ಕಿ ಹೊಡೆದ ಪರಿಣಾಮ ತಂದೆ ಸ್ಥಳದಲ್ಲೇ ಮೃತಪಟ್ಟರೆ, ಮಗಳು ಗಂಭೀರವಾಗಿ ಗಾಯಗೊಂಡ ಘಟನೆ ಉಪ್ಪೂರು ಗ್ರಾಮದ ರಾಷ್ಟ್ರೀಯ ಹೆದ್ದಾರಿ 66ರ ಸಂತೆಕಟ್ಟೆ ಸೇತುವೆಯಲ್ಲಿ ಭಾನುವಾರ ನಡೆದಿದೆ. ಸ್ಕೂಟರ್ ಸವಾರ ಕುಂದಾಪುರ ನೇರಳಕಟ್ಟೆ, ಕುರ್ಕುಂಜೆ ನಿವಾಸಿ ವೆಂಕಟರಮಣ ಆಚಾರ್ಯ(55) ಮೃತ ದುರ್ದೈವಿ. ಇವರ ಮಗಳು ಹಿಂಬದಿ ಸವಾರೆ ಭವ್ಯಶ್ರೀ(17) ಗಂಭೀರವಾಗಿ ಗಾಯಗೊಂಡು ಉಡುಪಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ತಂದ ಹಾಗೂ ಮಗಳು ಸ್ಕೂಟರ್‌ನಲ್ಲಿ ಕುಂದಾಪುರದಿಂದ ಉಡುಪಿ ಕಡೆ ಹೋಗುತ್ತಿದ್ದರು. ಈ ವೇಳೆ […]