ಆಗ ನಾನು ಹಳ್ಳಿಗಾಡಿನ ಪ್ರಶಾಂತ ಶೆಟ್ಟಿ, ಈಗ ಜನಗಳು ಪ್ರೀತಿಸೋ ರಿಷಬ್ ಶೆಟ್ಟಿ.

ಕುಂದಾಪುರ: ಹಲವು ಕನಸುಗಳನ್ನು ಸಾಕಾರಗೊಳಿಸಲು ಸಿನೆಮಾ ಕ್ಷೇತ್ರಕ್ಕೆ 15 ವರ್ಷಗಳ ಹಿಂದೆ ಪ್ರಶಾಂತ್ ಶೆಟ್ಟಿಯಾಗಿ ಹೋದೆ. ಒಬ್ಬ ಹಳ್ಳಿಗಾಡಿನ ಸಾಮಾನ್ಯ ಹುಡುಗ ಪ್ರಶಾಂತ್ ಶೆಟ್ಟಿ ಇದೀಗ ಸಿನೆಮಾ ಕ್ಷೇತ್ರದಲ್ಲಿ ರಿಷಬ್ ಶೆಟ್ಟಿಯಾಗಿ ನಿಂತಿದ್ದೇನೆ. ಈ ಸಾಧನೆ ಸುಲಭದಲ್ಲಿ ಸಿಗಲಿಲ್ಲ. ಆರಂಭದಲ್ಲಿ ನನ್ನ ಮುಂದೆ ಹಲವು ಸವಾಲುಗಳಿದ್ದವು. ಆದರೆ ಕಳೆದ 3 ವರ್ಷಗಳಿಂದೀಚೆಗೆ ಜನರು ನನ್ನನ್ನು ಗುರುತಿಸುತ್ತಿದ್ದಾರೆ. ಉಳಿದವರು ಕಂಡಂತೆ ಸಿನೆಮಾದಲ್ಲಿ ಯಶಸ್ಸು ಸಿಕ್ಕರೂ ಜನ ನನ್ನನ್ನು ಗುರುತಿಸಲು ಆರಂಭಿಸಿದ್ದು ಕಿರಿಕ್ ಪಾರ್ಟಿ ಯಶಸ್ಸಿನ ಬಳಿಕ. ಯಶಸ್ಸು ಸಿಗಬೇಕಾದರೆ […]