ಈ ದಕ್ಷ, ಅರಣ್ಯಾಧಿಕಾರಿಗೆ ನೀವೂ ಬೆಂಬಲ ನೀಡಿ: ಪ್ರಾಮಾಣಿಕ ಅಧಿಕಾರಿ ಮುನಿರಾಜು ವರ್ಗಾವಣೆಗೆ ತಡೆ ಕೋರಿ ಅಭಿಯಾನ ಶುರು

ಮಂಗಳೂರು/ಉಡುಪಿ: ಹೆಬ್ರಿಯ ದಕ್ಷ ವಲಯ ಅರಣ್ಯಾಧಿಕಾರಿ ಮುನಿರಾಜು ಅವರ ವರ್ಗಾವಣೆ ತಡೆಕೋರಿ ಇದೀಗ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ವಿರೋಧ ವ್ಯಕ್ತವಾಗಿದೆ. ಹೆಬ್ರಿ ತಾಲೂಕು ವಲಯ ಅರಣ್ಯಾಧಿಕಾರಿಯಾಗಿರುವ ಮುನಿರಾಜ್, ದಕ್ಷ ಅರಣ್ಯಾಧಿಕಾರಿಯಾಗಿ ಪರಿಸರಕ್ಕೆ ಕಂಟಕವಾಗಿರುವ ಪ್ರಭಾವಿ ರಾಜಕಾರಣಿಗಳನ್ನು ಯಾವ ಮುಲಾಜು ಇಲ್ಲದೇ ಮಟ್ಟ ಹಾಕಿದ್ದರು. ತಾಲೂಕಿನಲ್ಲಿ ಪ್ರಾಮಾಣಿಕವಾಗಿ, ಪರಿಸರದ ಪರ ಹೋರಾಡಿದ ಈ ಯುವ ಅಧಿಕಾರಿಗೀಗ ಉಡುಪಿ ಜಿಲ್ಲೆಯ ಶಾಸಕರುಗಳು ಸೇರಿ ವರ್ಗಾವಣೆ ಮಾಡಿಸಿದ್ದಾರೆ ಎನ್ನುವುದು ವಿವಿಧ ಮೂಲಗಳಿಂದ ಸಾಬೀತಾಗಿದೆ. ಈ ಅಧಿಕಾರಿಯ  ಕಾರ್ಯ ದಕ್ಷತೆ ಮತ್ತು ಕರ್ತವ್ಯ […]