‘ಹೆಜ್ಜೆ’ ಗಾಗಿ ಮತ್ತೆ ಒಂದಾಗ್ತಿದ್ದಾರೆ ಎಚ್ ಡಿಕೆ-ಎಸ್. ನಾರಾಯಣ್ ಜೋಡಿ

ಬೆಂಗಳೂರು: ಸ್ಯಾಂಡಲ್ ವುಡ್ ನ ಹಿಟ್ ಜೋಡಿಯೆಂದೇ ಕರೆಸಿಕೊಳ್ಳುವ ನಿರ್ಮಾಪಕ ಎಚ್​.ಡಿ.ಕುಮಾರಸ್ವಾಮಿ ಹಾಗೂ ನಿರ್ದೇಶಕ ಎಸ್. ನಾರಾಯಣ್ ಮತ್ತೆ ಒಂದಾಗ್ತಿದ್ದಾರೆ. ‘ಹೆಜ್ಜೆ’ ಎಂಬ ಕಾದಂಬರಿಯನ್ನು ಸಿನಿಮಾ ಮಾಡಲು ಹಿಟ್ ಕಾಂಬಿನೇಷನ್ ಮತ್ತೆ ರೆಡಿಯಾಗಿದೆ ಎನ್ನಲಾಗಿದೆ. ಹೆಜ್ಜೆ ಕಾದಂಬರಿಯನ್ನು ಸಿನಿಮಾ ಮಾಡಲು ಈಗಾಗಲೇ ಮಾತುಕತೆ ಮುಗಿಸಿದ್ದು, ಈ ಚಿತ್ರಕ್ಕೆ ಸ್ಟಾರ್ ನಟರನ್ನು ಕರೆತರಲು ನಾರಾಯಣ್ ತಯಾರಿ ಮಾಡ್ತಿದ್ದಾರಂತೆ. ಶೀಘ್ರದಲ್ಲೇ ಚಿತ್ರದ ನಾಯಕ ಯಾರು ಎಂದು ರಿವೀಲ್ ಮಾಡ್ತೇವೆ ಎಂದು ಎಸ್. ನಾರಾಯಣ್ ತಿಳಿಸಿದ್ದಾರೆ.