ಒಟಿಪಿ ನೀಡಿ ಹಣ ಕಳೆದುಕೊಂಡ ನಿವೃತ್ತ ಡಿಜಿ-ಐಜಿಪಿ
ಬೆಂಗಳೂರು: ರಾಜ್ಯದ ನಿವೃತ್ತ ಪೊಲೀಸ್ ಮಹಾನಿರ್ದೇಶಕ (ಡಿಜಿ–ಐಜಿಪಿ) ಶಂಕರ್ ಬಿದರಿ ಸೈಬರ್ ವಂಚಕರ ಜಾಲಕ್ಕೆ ಸಿಲುಕಿ ₹ 89 ಸಾವಿರ ಕಳೆದುಕೊಂಡಿರುವ ಘಟನೆ ನಡೆದಿದೆ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ) ಸಹಾಯವಾಣಿ ಪ್ರತಿನಿಧಿ ಸೋಗಿನಲ್ಲಿ ಕರೆ ಮಾಡಿದ್ದ ವಂಚಕರು ನಿವೃತ್ತ ಡಿಜಿ ಅನ್ನು ಖೆಡ್ಡಾಕ್ಕೆ ಬೀಳಿಸಿದ್ದಾರೆ. ಬ್ಯಾಂಕ್ ಖಾತೆಯ ಪ್ಯಾನ್ ನಂಬರ್ ನವೀಕರಣ ಮಾಡಬೇಕು ಎಂದು ಸೈಬರ್ ವಂಚಕರ ಮಾತು ನಂಬಿ ಒಟಿಪಿ (ಒನ್ ಟೈಂ ಪಾಸ್‌ವರ್ಡ್) ನೀಡಿ ಶಂಕರ ಬಿದರಿ ಹಣ ಕಳೆದುಕೊಂಡಿದ್ದಾರೆ. ಈ […]