ಉಡುಪಿ: ನಿಟ್ಟೂರು ನಿವಾಸಿ ನಾಪತ್ತೆ

ಉಡುಪಿ: ಉಡುಪಿ ತಾಲೂಕು ಪುತ್ತೂರು ಗ್ರಾಮದ ನಿಟ್ಟೂರು ನಿವಾಸಿ ವಾದಿರಾಜ ಗಾಣಿಗ (39) ಜೂನ್ 13ರಿಂದ ನಾಪತ್ತೆಯಾಗಿದ್ದು, ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ವಾದಿರಾಜ ಗಾಣಿಗ ತನ್ನ ಹೆಂಡತಿ-ಮಕ್ಕಳೊಂದಿಗೆ ಬೆಂಗಳೂರಿನಲ್ಲಿ ವಾಸವಿದ್ದವರು. ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಊರಿಗೆ ಬಂದಿದ್ದರು.‌ ಜೂನ್ 9 ರಂದು ತನ್ನ ಅಕ್ಕನ ಮನೆಯಾದ ಕುಂದಾಪುರದ ಬಸ್ರೂರು ಮೂರುಕೈಗೆ ಹೋಗಿದ್ದರು. ಜೂನ್ 13ರಂದು ಸರಕು ಸಾಗಾಟದ ಲಾರಿಯಲ್ಲಿ ಉಡುಪಿಗೆ ಬಂದು ಇಂದ್ರಾಳಿ ರೈಲ್ವೆ ನಿಲ್ದಾಣ ರಸ್ತೆಯ ಬಳಿ ಇಳಿದುಕೊಂಡಿದ್ದರು. ಆದರೆ […]