ಕಟಪಾಡಿ: ಎಸ್.ವಿ.ಎಸ್ ಹಾಗೂ ತ್ರಿಶಾ ಸಂಸ್ಥೆಯಲ್ಲಿ ಗಣರಾಜ್ಯೋತ್ಸವ ಆಚರಣೆ
ಕಟಪಾಡಿ : ಜನವರಿ 26 ರಾಷ್ಟ್ರದೆಲ್ಲೆಡೆ ಗಣರಾಜ್ಯೋತ್ಸವ ಸಂಭ್ರಮ ಮನೆಮಾಡಿದ್ದು ಆ ನಿಟ್ಟಿನಲ್ಲಿ ಕಟಪಾಡಿಯ ಎಸ್.ವಿ.ಎಸ್ ಸಂಸ್ಥೆಗಳು ಹಾಗೂ ತ್ರಿಶಾ ಸಂಸ್ಥೆಯಿಂದ ಗಣರಾಜ್ಯೋತ್ಸವದ ಆಚರಣೆ ಎಸ್.ವಿ.ಎಸ್ ಶಾಲೆಯ ಮೈದಾನದಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿದ್ದ ಭಾರತೀಯ ರಿಸರ್ವ್ ಬ್ಯಾಂಕ್ ನೋಟ್ ಮುದ್ರಣ್ ಪ್ರೈ. ಲಿ. ಇದರ ವ್ಯವಸ್ಥಾಪಕ ಶ್ರೀಧರ್ ರಾವ್ ಮಾತನಾಡಿ ಭಾರತದ ವಿವಿಧತೆಯಲ್ಲಿ ಏಕತೆಯನ್ನು ನಾವೆಲ್ಲರೂ ಅನುಭವಿಸಬೇಕು ಜೊತೆಗೆ ನಾವೆಲ್ಲರೂ ಒಂದೇ ಎನ್ನುವ ಸಂವಿಧಾನದ ಅಡಿಯಲ್ಲಿ ಬದುಕಬೇಕು ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಅತಿಥಿಯಾಗಿ ಎಸ್.ವಿ.ಎಸ್ ವಿದ್ಯಾವರ್ಧಕ […]
ಉಡುಪಿ: ಸಂಭ್ರಮದ ಗಣರಾಜ್ಯೋತ್ಸವ ದಿನಾಚರಣೆ; ಸಾಧಕರಿಗೆ ಸನ್ಮಾನ
ಉಡುಪಿ: ಜಿಲ್ಲಾಡಳಿತದ ವತಿಯಿಂದ ಜ.26ರಂದು ಇಲ್ಲಿನ ಮಹಾತ್ಮಗಾಂಧಿ ಜಿಲ್ಲಾ ಮೈದಾನ ಅಜ್ಜರಕಾಡಿನಲ್ಲಿ 75ನೇ ಗಣರಾಜ್ಯೋತ್ಸವವನ್ನು ಆಚರಿಸಲಾಯಿತು. ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ರಾಷ್ಟ್ರ ಧ್ವಜಾರೋಹಣ ನೆರವೇರಿಸಿ ನಂತರ ಜಿಲ್ಲಾ ಪೊಲೀಸ್ ಪಡೆ, ಎನ್‌ಸಿಸಿ, ಸ್ಕೌಟ್ಸ್ ಮತ್ತು ಗೈಡ್ಸ್ ವತಿಯಿಂದ ಗೌರವ ರಕ್ಷೆ ಸ್ವೀಕರಿಸಿದರು. ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಮಾತನಾಡಿ, ಜಿಲ್ಲೆಯಲ್ಲಿ ಸರಕಾರ ಕೈಗೊಂಡಿರುವ ವಿವಿಧ ಅಭಿವೃದ್ಧಿ ಕಾಮಗಾರಿಗಳ ಕುರಿತು ಮಾಹಿತಿ ನೀಡಿದರು. ರಾಜ್ಯ ಸರಕಾರದಿಂದ ಜನಸ್ನೇಹಿ ಆಡಳಿತ ಸರ್ವತೋಮುಖ ಅಭಿವೃದ್ಧಿಗೆ ಹಲವು ಅಭಿವೃದ್ಧಿ ಕಾರ್ಯಕ್ರಮಗಳಿಗೆ ನೆರವು […]
ಅಮೃತಕಾಲದ ಗಣರಾಜ್ಯೋತ್ಸವದಲ್ಲಿ ‘ನಾರಿ ಶಕ್ತಿ’ಯ ಠೇಂಕಾರ!! ಮಹಿಳಾ ಸಬಲೀಕರಣಕ್ಕೆ ಸಾಕ್ಷಿಯಾದ ಕರ್ತವ್ಯ ಪಥ
ನವದೆಹಲಿ: ಭಾರತವು ತನ್ನ 75 ನೇ ಗಣರಾಜ್ಯೋತ್ಸವದ ಆಚರಣೆಯೊಂದಿಗೆ ಐತಿಹಾಸಿಕ ಮೈಲಿಗಲ್ಲನ್ನು ಗುರುತಿಸಿದೆ. ರಾಷ್ಟ್ರದ ರಾಜಧಾನಿಯ ಕರ್ತವ್ಯ ಪಥದಲ್ಲಿ ಭವ್ಯವಾದ ಪರೇಡ್ ಭಾರತದ ಮಿಲಿಟರಿ ಪರಾಕ್ರಮ ಮತ್ತು ಸಾಂಸ್ಕೃತಿಕ ವೈವಿಧ್ಯತೆಯನ್ನು ಪ್ರದರ್ಶಿಸಿದ್ದಲ್ಲದೆ, ನಾರಿ ಶಕ್ತಿ ಮತ್ತು ಮಹಿಳಾ ಸಬಲೀಕರಣವನ್ನು ಅನಾವರಣಗೊಳಿಸಿದೆ. ಇದೇ ಮೊದಲ ಬಾರಿಗೆ, ಎಲ್ಲಾ ಮಹಿಳಾ ತ್ರಿ-ಸೇವಾ ದಳವು ಪರೇಡ್‌ನಲ್ಲಿ ಭಾಗವಹಿಸಿತು. ಆರ್ಮಿ ಡೆಂಟಲ್ ಕಾರ್ಪ್ಸ್‌ನ ಕ್ಯಾಪ್ಟನ್ ಅಂಬಾ ಸಮಂತ್, ಭಾರತೀಯ ನೌಕಾಪಡೆಯ ಸರ್ಜ್ ಲೆಫ್ಟಿನೆಂಟ್ ಕಾಂಚನಾ, ಭಾರತೀಯ ವಾಯುಪಡೆಯ ಫ್ಲಿಟ್ ಲೆಫ್ಟಿನೆಂಟ್ ದಿವ್ಯ ಪ್ರಿಯಾ […]
ಕರ್ತವ್ಯಪಥದಲ್ಲಿ ಭರತನಾಟ್ಯ ಪ್ರದರ್ಶನ ನೀಡಿದ ವಸುಪ್ರದಾ ಇವರಿಗೆ ಅಭಿನಂದನೆ
ಉಡುಪಿ : ರಂಗಭೂಮಿ ಉಡುಪಿ ಇದರ ರಂಗಭೂಮಿ ರಂಗೋತ್ಸವದ ಅಂಗವಾಗಿ ನಡೆದ ಸಮಾರಂಭದಲ್ಲಿ, ನವದೆಹಲಿಯ ಕರ್ತವ್ಯಪಥದಲ್ಲಿ ನಡೆದ ಗಣರಾಜ್ಯೋತ್ಸವ ಪೆರೇಡ್ ನಲ್ಲಿ ರಾಷ್ಟ್ರೀಯ ಸೇವಾ ಯೋಜನೆ ತಂಡದೊಂದಿಗೆ ಭಾಗವಹಿಸಿ ಭರತನಾಟ್ಯ ಪ್ರದರ್ಶನವನ್ನು ನೀಡಿ ಮೆಚ್ಚುಗೆಗಳಿಸಿದ ವಸುಪ್ರದಾ ಇವರನ್ನು ಉಡುಪಿ ಸಮಸ್ತ ನಾಗರಿಕ ಪರವಾಗಿ ಅಭಿನಂದಿಸಲಾಯಿತು. ಈ ಸಂದರ್ಭದಲ್ಲಿ ಶಾಸಕ ರಘುಪತಿ ಭಟ್, ನಾಡೋಜ ಜಿ.ಶಂಕರ್, ಎಚ್.ಎಸ್.ಬಲ್ಲಾಳ್,ತ ಲ್ಲೂರು ಶಿವರಾಮ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.
ತ್ರಿಶಾ ಸಂಸ್ಥೆಯಲ್ಲಿ ಗಣರಾಜ್ಯೋತ್ಸವ ಸಂಭ್ರಮಾಚರಣೆ
ಕಟಪಾಡಿ: ದೇಶ ಭಕ್ತಿ ಎನ್ನುವುದು ಯಾವತ್ತೋ ಒಂದು ದಿನದ ಆಚರಣೆ ಅಲ್ಲ, ಅದು ಪ್ರತಿದಿನವೂ ನಮ್ಮೊಳಗೆ ನಮ್ಮ ಯೋಚನೆಗಳಲ್ಲಿ ಅಡಕವಾಗಿರುವಂಥದ್ದು ಎಂದು ಖ್ಯಾತ ಆರ್ಥೋಪೆಡಿಕ್ ಸರ್ಜನ್ ಅರ್ಜುನ್ ಬಲ್ಲಾಳ್ ಹೇಳಿದರು. ಅವರು ಇತ್ತೀಚಿಗೆ ತ್ರಿಶಾ ವಿದ್ಯಾ ಕಾಲೇಜು ಆಫ್ ಕಾಮರ್ಸ್ ಅಂಡ್ ಮ್ಯಾನೇಜ್ಮೆಂಟ್, ತ್ರಿಶಾ ವಿದ್ಯಾ ಸಂಧ್ಯಾ ಕಾಲೇಜು ಮತ್ತು ಎಸ್‌ವಿಎಸ್ ವಿದ್ಯಾವರ್ಧಕ ಸಂಘ ಜೊತೆಯಾಗಿ ಆಚರಿಸಿದ್ದ ಗಣರಾಜ್ಯೋತ್ಸವದಲ್ಲಿ ಮುಖ್ಯ ಅತಿಥಿಯಾಗಿ ಆಗಮಿಸಿ, ಧ್ವಜಾರೋಹಣಗೈದು ಮಾತನಾಡಿದರು. ಕಾರ್ಯಕ್ರಮದಲ್ಲಿ ತ್ರಿಶಾ ಹಾಗೂ ಎಸ್.ವಿ.ಎಸ್. ಸಂಸ್ಥೆಯ ಆಡಳಿತ ಮಂಡಳಿಯ ಪದಾಧಿಕಾರಿಗಳು, […]