ಕರಾವಳಿಯ ಬಂದರುಗಳನ್ನು ಸಮಗ್ರ ರೀತಿಯಲ್ಲಿ ಅಭಿವೃದ್ದಿ ಪಡಿಸುವ ಗುರಿ: ಗೃಹ ಸಚಿವ ಬೊಮ್ಮಾಯಿ

ಉಡುಪಿ : ರಾಜ್ಯದ ಆರ್ಥಿಕತೆಗೆ ಪುಷ್ಠಿ ನೀಡುವ ಕರಾವಳಿಯನ್ನು ಪೂರ್ಣ ಪ್ರಮಾಣದಲ್ಲಿ ಇದುವರೆಗೂ ಬಳಸಿಕೊಳ್ಳಲು ಸಾಧ್ಯವಾಗಿಲ್ಲ, ಕರಾವಳಿಯ ಬಂದರುಗಳನ್ನು ಸಮಗ್ರ ರೀತಿಯಲ್ಲಿ ಅಭಿವೃದ್ದಿ ಪಡಿಸಿ, ಆಮದು ರಫ್ತು ಪ್ರಮಾಣವನ್ನು ಹೆಚ್ಚು ಮಾಡುವ ಮೂಲಕ ಹಾಗೂ ಒಳನಾಡು ಸಾರಿಗೆ ಮತ್ತು ಸಂಪರ್ಕ ರಸ್ತೆಗಳನ್ನು ಅಭಿವೃಧ್ದಿಗೊಳಿಸುವ  ಮೂಲಕ, ಪ್ರವಾಸೋದ್ಯವನ್ನು ದೊಡ್ಡ ಪ್ರಮಾಣದಲ್ಲಿ ಅಭಿವೃದ್ದಿಗೊಳಿಸಿ ಹೆಚ್ಚಿನ ಸಂಖ್ಯೆಯಲ್ಲಿ ದೇಶ ವಿದೇಶದ ಪ್ರವಾಸಿಗರನ್ನು ಆಕರ್ಷಿಸಬೇಕಿದೆ ಎಂದು ರಾಜ್ಯದ ಗೃಹ ಮತ್ತು ಸಹಕಾರ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ. […]