ಶೀಘ್ರವೇ ರಸ್ತೆ ದುರಸ್ತಿ ಮಾಡಿ, ಇಲ್ಲವೇ ಮತದಾನ ಬಹಿಷ್ಕಾರ ಎದುರಿಸಿ: ಎಳ್ಳಾರೆ ಗ್ರಾಮಸ್ಥರ ಎಚ್ಚರಿಕೆ

ಕಾರ್ಕಳ: ರಸ್ತೆಯ ದುರಸ್ತಿಗಾಗಿ ಎಳ್ಳಾರೆ ಹೊಯ್ಗೆಜಡ್ಡಿನ ಜನರು ವಿನೂತನ ರೀತಿಯ ಪ್ರತಿಭಟನೆಗೆ ಇಳಿದಿದ್ದಾರೆ. ಈ ಬಾರಿ ಸುರಿದ ಧಾರಾಕಾರ ಮಳೆಯಿಂದಾಗಿ ಎಳ್ಳಾರೆ-ಹೊಯ್ಗೆಜಡ್ಡು ರಸ್ತೆ ಸಂಪೂರ್ಣ ಹಾಳಾಗಿದ್ದು, ವಾಹನ ಸವಾರರು ಪರದಾಡುತ್ತಿದ್ದಾರೆ. ಗ್ರಾಮಸ್ಥರಿಗೆ ನಡೆದುಕೊಂಡು‌ ಹೋಗಲು ಕಷ್ಟಪಡಬೇಕಾದ ಸ್ಥಿತಿ ಎದುರಾಗಿದೆ. ಇದರಿಂದ ಸಾರ್ವಜನಿಕರು ಜನಪ್ರತಿನಿಧಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಗ್ರಾಮ ಪಂಚಾಯತ್ ಚುನಾವಣೆ ಸಮೀಪಿಸುತ್ತಿದ್ದಂತೆ ಗ್ರಾಮಸ್ಥರು ಹೊಸ ರೀತಿಯ ಪ್ರತಿಭಟನೆಗೆ ಮುಂದಾಗಿದ್ದು, ಆ ಮೂಲಕ ಗ್ರಾಪಂಗೆ ಸವಾಲೊಡ್ಡಿದ್ದಾರೆ. ಮತದಾನ ಬಹಿಷ್ಕಾರದ ಬ್ಯಾನರ್ ಆಳವಡಿಸುವ ಮೂಲಕ ಚುನಾವಣೆ ಹೊಸ್ತಿಲಲ್ಲೇ ಗ್ರಾಪಂ […]