ದ್ವಿತೀಯ ಪಿಯುಸಿ ಪೂರಕ ಪರೀಕ್ಷೆ: 7 ಮಂದಿ ಗೈರು

ಉಡುಪಿ, ಜೂನ್ 14: ಜಿಲ್ಲೆಯಲ್ಲಿ ಶುಕ್ರವಾರ ನಡೆದ ದ್ವಿತೀಯ ಪಿಯುಸಿ ಪೂರಕ ಪರೀಕ್ಷೆಯಲ್ಲಿ 27 ಮಂದಿ ಪರೀಕ್ಷೆ ಬರೆದಿದ್ದು, 7 ಮಂದಿ ಗೈರಾಗಿದ್ದಾರೆ. ಎಲೆಕ್ಟ್ರಾನಿಕ್ಸ್ ಪರೀಕ್ಷೆಗೆ ನೊಂದಾಯಿಸಿದ್ದ 4 ಮಂದಿ ವಿದ್ಯಾರ್ಥಿಗಳಲ್ಲಿ 3 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, ಒಬ್ಬರು ಗೈರು ಹಾಜರಾಗಿದ್ದಾರೆ. ಕಂಪ್ಯೂಟರ್ ಸೈನ್ಸ್ ಪರೀಕ್ಷೆಗೆ 30 ಮಂದಿ ಹೆಸರು ನೊಂದಾಯಿಸಿದ್ದು, 24 ಮಂದಿ ಪರೀಕ್ಷೆ ಬರೆದಿದ್ದು, 6 ವಿದ್ಯಾರ್ಥಿಗಳು ಗೈರು ಹಾಜರಾಗಿದ್ದಾರೆ ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕರ ಪ್ರಕಟಣೆ ತಿಳಿಸಿದೆ.

ದ್ವಿತೀಯ ಪಿಯುಸಿ ಪೂರಕ ಪರೀಕ್ಷೆ: 84 ಮಂದಿ ಗೈರು

ಉಡುಪಿ, ಜೂನ್ 11: ಜಿಲ್ಲೆಯಲ್ಲಿ ಮಂಗಳವಾರ ನಡೆದ ದ್ವಿತೀಯ ಪಿಯುಸಿ ಪೂರಕ ಪರೀಕ್ಷೆಯಲ್ಲಿ ಒಟ್ಟು 639 ಮಂದಿ ಪರೀಕ್ಷೆ ಬರೆದಿದ್ದಾರೆ. ಸಮಾಜಶಾಸ್ತ್ರ ಪರೀಕ್ಷೆಗೆ 61 ಮಂದಿ ನೊಂದಾಯಿಸಿದ್ದು, 50 ಮಂದಿ ಪರೀಕ್ಷೆ ಬರೆದಿದ್ದು, 11 ಮಂದಿ ಗೈರಾಗಿದ್ದಾರೆ. ಲೆಕ್ಕಶಾಸ್ತ್ರ (ಎನ್‍ಎಸ್) ಪರೀಕ್ಷೆಗೆ 246 ಮಂದಿ ಹೆಸರು ನೊಂದಾಯಿಸಿದ್ದು, 217 ಮಂದಿ ಪರೀಕ್ಷೆ ಬರೆದಿದ್ದು, 29 ಮಂದಿ ಗೈರಾಗಿದ್ದಾರೆ. ಲೆಕ್ಕಶಾಸ್ತ್ರ (ಓಎಸ್) ಪರೀಕ್ಷೆಗೆ 96 ಮಂದಿ ಹೆಸರು ನೊಂದಾಯಿಸಿದ್ದು, 77 ಮಂದಿ ಪರೀಕ್ಷೆಗೆ ಹಾಜರಾಗಿದ್ದು, 19 ಮಂದಿ ಗೈರಾಗಿದ್ದಾರೆ. […]