ಆರ್ ಸಿ ಕ್ರಿಕೆಟ್ ಸಂಸ್ಥೆಯಿಂದ ಅಂಗವಿಕಲ-ಬಡಜನರ ಸಹಾಯಾರ್ಥ ಕ್ರಿಕೆಟ್ ಟೂರ್ನಿ:ಪ್ರಕೃತಿ ವೀರಕೇಸರಿ ತಂಡದ ಮಡಿಲಿಗೆ ಆರ್‌ಸಿ ಟ್ರೋಫಿ
ಉಡುಪಿ: ರಾಜೀವನಗರ ಕ್ರಿಕೆಟರ್ಸ್, ರಾಜೀವನಗರ–ಮಣಿಪಾಲ ಇವರ ಆಶ್ರಯದಲ್ಲಿ ಅಂಗವಿಕಲ ಮತ್ತು ಬಡಜನರ ಸಹಾಯಾರ್ಥವಾಗಿ ರಾಜೀವನಗರದ ಆರ್‌ಸಿ ಮೈದಾನದಲ್ಲಿ ಆಯೋಜಿಸಿದ್ದ ಎಂಟನೇ ವರ್ಷದ ‘ಆರ್‌ಸಿ ಟ್ರೋಫಿ-–2019’ ಕ್ರಿಕೆಟ್ ಟೂರ್ನಿಯಲ್ಲಿ ಪ್ರಕೃತಿ ವೀರಕೇಸರಿ ತಂಡ 44,444 ನಗದು ಪುರಸ್ಕಾರದೊಂದಿಗೆ ಆರ್‌ಸಿ ಟ್ರೋಫಿಯನ್ನು ಗೆದ್ದುಗೊಂಡಿತು. ಉದ್ಯಾವರದ ಶ್ರೀಗುರುಬ್ರಹ್ಮ ತಂಡ 22,222 ನಗದು ಪುರಸ್ಕಾರದೊಂದಿಗೆ ರನ್ನರ್‌ಅಪ್ ಪ್ರಶಸ್ತಿಯನ್ನು ಪಡೆದುಕೊಂಡಿತು. ಪ್ರಕೃತಿ ವೀರಕೇಸರಿ ತಂಡದ ಸಚಿನ್ ಕೋಟೇಶ್ವರ ಪಂದ್ಯ ಶ್ರೇಷ್ಠ ಹಾಗೂ ಅದೇ ತಂಡದ ಪ್ರದೀಪ್ ಶೆಟ್ಟಿ ಸರಣಿ ಶ್ರೇಷ್ಠ ಪ್ರಶಸ್ತಿ ಪಡೆದುಕೊಂಡರು. ಶ್ರೀಗುರುಬ್ರಹ್ಮ […]