3.76 ಕೋಟಿ ದಾಖಲೆಯ ಹಣ ಸಂಗ್ರಹ: ಶ್ರೀರಾಘವೇಂದ್ರ ಸ್ವಾಮಿ ಮಂತ್ರಾಲಯ

ರಾಯಚೂರು: ರಾಯಚೂರಿಗೆ ಸಮೀಪಿಸಿರುವ ಮಂತ್ರಾಲಯದ ಶ್ರೀರಾಯರ ಮಠದಲ್ಲಿನ ಹುಂಡಿಗಳನ್ನು ತೆಗೆದು ಸೋಮವಾರ ಸಂಗ್ರಹವಾಗಿರುವ ಕಾಣಿಕೆಯ ಏಣಿಕೆ ನಡೆಸಲಾಯಿತು. ಬೆಳಗ್ಗೆಯಿಂದ ಸಂಜೆಯವರೆಗೂ ಎಣಿಕೆ ಕಾರ್ಯ ನಡೆದಿದ್ದು, ಇದುವರೆಗೆ ಸಂಗ್ರಹವಾಗಿದ್ದ ಮೊತ್ತಕ್ಕಿಂತಲೂ ದಾಖಲೆಯ ಪ್ರಮಾಣದಲ್ಲಿ ಹಣ ಸಂಗ್ರಹವಾಗಿದೆ ಎಂದು ತಿಳಿದುಬಂದಿದೆ.ಕಲಿಯುಗದ ಕಾಮಧೇನು, ಭಕ್ತರ ಕಲ್ಪವೃಕ್ಷ ಮಂತ್ರಾಲಯದ ಶ್ರೀರಾಘವೇಂದ್ರ ಸ್ವಾಮಿ ಮಠದ ಕಾಣಿಕೆ ಹುಂಡಿಯಲ್ಲಿ ದಾಖಲೆ ಹಣ ಸಂಗ್ರಹವಾಗಿದೆ. 3.69 ಕೋಟಿ ರೂ. ವಿವಿಧ ಮೌಲ್ಯದ ಮುಖಬೆಲೆಯ ನೋಟುಗಳು, 7.05 ಲಕ್ಷ ರೂ. ಮೌಲ್ಯದ ನಾಣ್ಯಗಳು ಸೇರಿದಂತೆ ಒಟ್ಟು 3.76 ಕೋಟಿ […]