ಹಿರಿಯ ಪತ್ರಕರ್ತ ರವಿರಾಜ್ ವಳಳಂಬೆ ಹೃದಯಘಾತದಿಂದ ನಿಧನ‌

ಉಡುಪಿ: ಹಿರಿಯ ಪತ್ರಕರ್ತ ರವಿರಾಜ್ ವಳಲಂಬೆ ಹೃದಯಘಾತದಿಂದ ಮಂಗಳವಾರ ರಾತ್ರಿ ನಿಧನ‌ ಹೊಂದಿದ್ದಾರೆ. ಉಡುಪಿಯ‌ ಕಿನ್ನಿಮುಲ್ಕಿಯಲ್ಲಿರುವ ನಿವಾಸದಲ್ಲಿ ಇದ್ದಕ್ಕಿದ್ದಂತೆ ಎದೆ‌ನೋವು‌ ಕಾಣಿಸಿಕೊಂಡ‌ ಹಿನ್ನಲೆಯಲ್ಲಿ ಕೂಡಲೇ ಅದರ್ಶ ಅಸ್ಪತ್ರೆಗೆ ಕರೆದುಕೊಂಡು‌ ಹೋಗುತ್ತಿದ್ದಾಗ ದಾರಿಯಲ್ಲಿಯೇ ಅಸುನೀಗಿದ್ದಾರೆ. ಉಡುಪಿಯಲ್ಲಿ ಈ‌ಟಿವಿ ವರದಿಗಾರನಾಗಿ ಹಲವು ವರುಷಗಳ‌ ಕಾಲ ಸೇವೆ ಸಲ್ಲಿಸಿದ ರವಿರಾಜ್ ನಂತರ ಸುವರ್ಣ ವಾಹಿನಿಯಲ್ಲಿ  ಪೊಲಿಕಲ್ ವರದಿಗಾರನಾಗಿ‌ ಕೆಲಸ ಮಾಡಿ ಬಳಿಕ‌ ಉಡುಪಿಯಲ್ಲಿ ಪ್ರೈಮ್ ಟಿವಿ ನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿದ್ದರು.ಇಬ್ಬರು ಪುತ್ರಿಯರನ್ನು ಹೊಂದಿರುವ ಅವರು ಅಪಾರ ಬಂಧು‌ಮಿತ್ರರನ್ನು ಅಗಲಿದ್ದಾರೆ.