ಇಂದಿನಿಂದ ರಾಜ್ಯ ರಾಜಧಾನಿಯಲ್ಲಿ ಪೂರ್ಣರಾತ್ರಿ ತಾಳಮದ್ದಲೆ ಕಾರ್ಯಕ್ರಮ

ಬೆಂಗಳೂರು: ಬಣ್ಣ ಬಣ್ಣದ ವೇಷಗಳಿಲ್ಲದೆ, ಮಾತಿನ ವೈಖರಿಯ ಮೂಲಕವೇ ಕಥಾನಕವೊಂದನ್ನು ಕಟ್ಟಿಕೊಡುವ ತಾಳಮದ್ದಲೆ ಎಂಬ ಯಕ್ಷಗಾನದ ರಂಗ ಪ್ರಕಾರವೊಂದು ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ ಇದೇ ಮೊದಲ ಬಾರಿಗೆ ಪೂರ್ಣರಾತ್ರಿ ನಡೆಯಲಿದೆ. ಕೃಷ್ಣ ಸಂಧಾನ ಹಾಗೂ ಕರ್ಣಾರ್ಜುನ ಯಕ್ಷಗಾನ ತಾಳಮದ್ದಲೆ ಪ್ರಸಂಗಗಳು ಜು.22ರ ರಾತ್ರಿ 10 ರಿಂದ ಯಕ್ಷ ಸಂಕ್ರಾಂತಿ ಹೆಸರಿನಲ್ಲಿ ನಡೆಯಲಿವೆ. ಯಕ್ಷಗಾನ ಸಂಘಟಕ ನಾಗರಾಜ ಶೆಟ್ಟಿ ನೈಕಂಬಿ ಅವರ ಸಂಯೋಜನೆಯಲ್ಲಿ, ಕೃಷ್ಣ ಸಂಧಾನ, ಕರ್ಣಾ ರ್ಜುನ ಕಥಾನಕಗಳು ರವಿಚಂದ್ರ ಕನ್ನಡಿಕಟ್ಟೆ, ಗಣೇಶ್ ಹೆಬ್ರಿ, ಚಂದ್ರಕಾಂತ ಮೂಡುಬೆಳ್ಳೆ […]