ಶ್ರೀಕೃಷ್ಣಜನ್ಮಾಷ್ಟಮಿಗೆ ನೂತನ ವೇಷ ಧರಿಸಲು ಸಜ್ಜಾಗಿದೆ ರವಿ ಕಟಪಾಡಿ ತಂಡ: ಆರು ಮಕ್ಕಳ ಚಿಕಿತ್ಸೆಗಾಗಿ ಧನ ಸಂಗ್ರಹಣೆಯ ಗುರಿ

ಉಡುಪಿ: ರವಿ ಕಟಪಾಡಿ ಮತ್ತು ಗೆಳೆಯರ ಬಳಗವು ಈ ಬಾರಿ ವಿನೂತನ ವೇಷ ಧರಿಸಿ ಜನರ ಮುಂದೆ ಬರಲು ಸಜ್ಜಾಗಿದೆ. ಈ ಬಾರಿ ಆರು ಮಕ್ಕಳ ಚಿಕಿತ್ಸೆಗೆ ಧನ ಸಂಗ್ರಹ ಮಾಡುವ ಗುರಿ ಇದೆ ಎಂದು ರವಿ ಕಟಪಾಡಿ ಬುಧವಾರ ಪತ್ರಿಕಾ ಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾಧ್ಯಮ ಪ್ರತಿನಿಧಿಗಳಿಗೆ ತಿಳಿಸಿದರು. ತಮ್ಮ ವೇಷದ ಬಗ್ಗೆ ಗುಟ್ಟು ಬಿಟ್ಟುಕೊಡದ ರವಿ, ಹೈದರಾಬಾದ್, ಮಂಗಳೂರು ಮತ್ತು ಕಟಪಾಡಿಯ 7 ಕಲಾವಿದರು ಒಂದೂವರೆ ತಿಂಗಳಿನಿಂದ ಈ ವೇಷಕ್ಕಾಗಿ ತಯಾರಿ ನಡೆಸುತ್ತಿದ್ದಾರೆ ಎಂದಷ್ಟೇ […]