ಬಡ್ಡಿ ದರ: ಯಥಾಸ್ಥಿತಿ ಕಾಯ್ದುಕೊಂಡ ಆರ್ ಬಿಐ

ಮುಂಬೈ: ನಿರೀಕ್ಷೆಯಂತೆ ಆರ್‌ಬಿಐ ಬಡ್ಡಿ ದರದಲ್ಲಿ ಯಾವುದೇ ಬದಲಾವಣೆ ಮಾಡದೇ, ಯಥಾಸ್ಥಿತಿ ಕಾಯ್ದುಕೊಂಡಿದೆ. ಇಂದು ಮುಂಬೈಯಲ್ಲಿ 2021-22ನೇ ಆರ್ಥಿಕ ಸಾಲಿನ ಮೊದಲ ತ್ರೈಮಾಸಿಕದ ವಿತ್ತೀಯ ನೀತಿ ಪ್ರಕಟಿಸಿದ್ದು, ರೆಪೊ ದರವನ್ನು ಶೇಕಡಾ 4ರಷ್ಟು ಹಾಗೂ ರಿವರ್ಸ್ ರೆಪೊ ದರವನ್ನು ಶೇಕಡಾ 3.35ರಷ್ಟು ಯಥಾಸ್ಥಿತಿ ಕಾಯ್ದುಕೊಂಡಿದೆ. ಆರ್ಥಿಕ ಬೆಳವಣಿಗೆಯ ದರವನ್ನು ಕೂಡ ಬದಲಾಯಿಸದೆ ಶೇಕಡಾ 10.5ರಷ್ಟು ಹಣಕಾಸು ವರ್ಷ 2021-22ರಲ್ಲಿ ಇರಬಹುದು ಎಂದು ಕೂಡ ಅಂದಾಜಿಸಿದೆ. ಕೋವಿಡ್ -19 ಪ್ರಕರಣಗಳು ಹೆಚ್ಚಾಗುತ್ತಿದ್ದಂತೆ ಆರ್‌ಬಿಐ ಬಡ್ಡಿದರಗಳನ್ನು ಸಹಜ ಸ್ಥಿತಿಗೆ ಬರುವವರೆಗೆ […]