ಉತ್ತರಕಾಶಿ ಸುರಂಗ ಕೊರೆಯುವಿಕೆ ಕಾರ್ಯಾಚರಣೆ ಸಂಪೂರ್ಣ: ಕಾರ್ಮಿಕರ ಆಗಮನಕ್ಕೆ ಕೆಲವು ಗಂಟೆ ತಗಲುವ ನಿರೀಕ್ಷೆ
ದೆಹರಾದೂನ್: ಉತ್ತರಾಖಂಡದ ಉತ್ತರಕಾಶಿಯ ಸಿಲ್ಕ್ಯಾರಾ ಸುರಂಗದಲ್ಲಿ ಸಿಲುಕಿರುವ 41 ಕಾರ್ಮಿಕರನ್ನು ತಲುಪಲು ಪೈಪ್ ಅಳವಡಿಕೆ ಕಾರ್ಯ ಪೂರ್ಣಗೊಂಡಿದೆ ಎಂದು ಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಹೇಳಿದ್ದಾರೆ. ಸಿಲ್ಕ್ಯಾರಾ ಸುರಂಗದ ಅವಶೇಷಗಳೊಳಗೆ ಸಿಲುಕಿರುವ 41 ಕಾರ್ಮಿಕರನ್ನು ತಲುಪಲು “ರ‍್ಯಾಟ್-ಹೋಲ್ ಗಣಿಗಾರರ” ವಿಶೇಷ ತಂಡವು ನಿನ್ನೆ ಹಸ್ತಚಾಲಿತ ಕೊರೆಯುವ ಕಾರ್ಯಾಚರಣೆಯನ್ನು ಪ್ರಾರಂಭಿಸಿತು. ಯಾವುದೇ ಅಡೆತಡೆಗಳಿಲ್ಲದಿದ್ದರೆ, ಸಿಕ್ಕಿಬಿದ್ದ ಕಾರ್ಮಿಕರನ್ನು ಶೀಘ್ರವಾಗಿ ಸ್ಥಳಾಂತರಿಸುವ ನಿರೀಕ್ಷೆಯಿದೆ ಎಂದು ಸಿಲ್ಕ್ಯಾರಾ ರಕ್ಷಣಾ ಕಾರ್ಯಾಚರಣೆಯ ನೋಡಲ್ ಅಧಿಕಾರಿ ಮತ್ತು ಉತ್ತರಾಖಂಡ ಸರ್ಕಾರದ ಕಾರ್ಯದರ್ಶಿ ನೀರಜ್ ಖೈರ್ವಾಲ್ […]