ಜನವರಿ 12 ರಂದು ರಾಷ್ಟ್ರೀಯ ಯುವ ದಿನದ ಪ್ರಯುಕ್ತ ಉಚಿತ ಮಾಸಿಕ ಉನ್ನತಿ ಉದ್ಯೋಗ ಮೇಳಕ್ಕೆ ಚಾಲನೆ

ಉಡುಪಿ: ಕೌಶಲ್ಯ ಶಿಕ್ಷಣಕ್ಕೆ ಹಾಗೂ ಉದ್ಯೋಗಾಧಾರಿತ ತರಬೇತಿಗಳಿಗೆ ಪ್ರಸಿದ್ಧಿ ಪಡೆದಿರುವ ಉಡುಪಿಯ ಉನ್ನತಿ ಕೆರಿಯರ್ ಅಕಾಡೆಮಿಯು ಜಿಲ್ಲೆಯ ಹಾಗೂ ರಾಜ್ಯದ ಸಾವಿರಾರು ಯುವಕ-ಯುವತಿಯರಿಗೆ ಉದ್ಯೋಗವಕಾಶವನ್ನು ಸೃಷ್ಟಿಸುವ ನಿಟ್ಟಿನಲ್ಲಿ ಇದೀಗ ಜನವರಿ 12ರ “ರಾಷ್ಟ್ರೀಯ ಯುವ ದಿವಸ”ದ ಅಂಗವಾಗಿ ಜನವರಿ 2023ರಿಂದ ಜನವರಿ 2024ರ ವರೆಗೆ ಉಚಿತ ಮಾಸಿಕ “ಉನ್ನತಿ ಉದ್ಯೋಗ ಮೇಳ”ಗಳನ್ನು ಆಯೋಜಿಸಲಿದೆ. ಈ ಮೇಳವು ಪ್ರತಿ ತಿಂಗಳ ಎರಡನೇ ಗುರುವಾರದಂದು ಸಂಸ್ಥೆಯ ಕಚೇರಿಯಲ್ಲಿ ನೇರ ಸಂದರ್ಶನ ಅಥವಾ ಆನ್ ಲೈನ್ ಸಂದರ್ಶನದ ಮೂಲಕ ನಡೆಯಲಿದೆ. ಭಾಗವಹಿಸಲು […]