ರಾಸಲೀಲೆ ಸಿಡಿ ಶೇ. 100ರಷ್ಟು ನಕಲಿ: ಷಡ್ಯಂತರ ಮಾಡಿದವರನ್ನು ಜೈಲಿಗೆ ಹಾಕದೆ ಬಿಡಲ್ಲ: ರಮೇಶ್ ಜಾರಕಿಹೊಳಿ ಗುಡುಗು
ಬೆಂಗಳೂರು: ನನ್ನ ವಿರುದ್ಧ ಮಾಡಲಾಗಿರುವ ರಾಸಲೀಲೆ ಸಿಡಿ ನೂರಕ್ಕೆ ನೂರರಷ್ಟು ನಕಲಿ. ಈ ಸಿಡಿಯಲ್ಲಿ ಯಾವುದೇ ಸತ್ಯಾಂಶವಿಲ್ಲ ಎಂದು ಶಾಸಕ ರಮೇಶ್ ಜಾರಕಿಹೊಳಿ ಹೇಳಿದರು. ಇಂದು ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ನಾನು ನಿರಪರಾಧಿ, ಅಪರಾಧಿಯಲ್ಲ. ಇದು ನಾಲ್ಕು ತಿಂಗಳ ಹಿಂದೆ ಮಾಡಿರುವ ಸಿಡಿ. 26 ಗಂಟೆ ಮೊದಲೇ ಹೈಕಮಾಂಡ್ ಈ ಬಗ್ಗೆ ಮಾಹಿತಿ ನೀಡಿತ್ತು ಎಂದರು. ಇದು ರಾಜಕೀಯ ಷಡ್ಯಂತರ: ನನ್ನ ವಿರುದ್ಧ ರಾಜಕೀಯ ಷಡ್ಯಂತ್ರ ನಡಿತೀದೆ. ನನ್ನನ್ನು ರಾಜಕೀಯವಾಗಿ ಮುಗಿಸಲು ನೂರಾರು ಕೋಟಿ […]