ಕೋಲುಮಂಡೆ ಹಾಡನ್ನು ಯೂಟ್ಯೂಬ್ ನಿಂದ ಡಿಲೀಟ್ ಮಾಡಿ, ಕ್ಷಮೆಯಾಚಿಸಿದ ರ‍್ಯಾಪ್ ಸಿಂಗರ್ ಚಂದನ್ ಶೆಟ್ಟಿ
ಬೆಂಗಳೂರು: ರ‍್ಯಾಪ್ ಸಿಂಗರ್ ಚಂದನ್ ಶೆಟ್ಟಿ ಬಿಡುಗಡೆ ಮಾಡಿದ್ದ ‘ಕೋಲುಮಂಡೆ’ ರ‍್ಯಾಪ್ ಸಾಂಗ್ ಈಗ ವಿವಾದಕ್ಕೆ ಕಾರಣವಾಗಿದೆ. ಮೂರು ದಿನಗಳ ಹಿಂದೆ ಆನಂದ್ ಆಡಿಯೋ ಕಂಪೆನಿಯ ಯೂಟ್ಯೂಬ್ ಚಾನೆಲ್‌ನಲ್ಲಿ ಈ ಹಾಡನ್ನು ಚಂದನ್ ಶೆಟ್ಟಿ ಬಿಡುಗಡೆ ಮಾಡಿದ್ದರು. ಈ ಹಾಡಿನಲ್ಲಿ ಶಿವಶರಣೆ ಸಂಕಮ್ಮ ಅವರಿಗೆ ಅವಮಾನ ಮಾಡಲಾಗಿದೆ. ಭಕ್ತಿಗೀತೆಯನ್ನು ತಿರುಚುವ ಮೂಲಕ ಮಾದಪ್ಪನ ಭಕ್ತರ ಮನಸ್ಸಿಗೆ ನೋವುಂಟು ಮಾಡಲಾಗಿದೆ ಎಂದು ಫೇಸ್‌ಬುಕ್‌ನ ಶ್ರೀಮಲೆಮಹದೇಶ್ವರ ಸ್ವಾಮಿ ಗ್ರೂಪ್‌ನಲ್ಲಿ ಚಾಮರಾಜನಗರ ಜಿಲ್ಲೆಯ ಹಲವು ಯುವಕರು ಚಂದನ್ ವಿರುದ್ಧ ಆಕ್ರೋಶ ಮೊಳಗಿಸಿದ್ದಾರೆ. […]