ಆಚಾರ್ಯಾಸ್‌ ಏಸ್‌: ರ‍್ಯಾಂಕ್‌ ವಿಜೇತರಿಗೆ ಆಚಾರ್ಯ ಪುರಸ್ಕಾರ

ಉಡುಪಿ: ಒಂಬತ್ತನೇ ತರಗತಿ, ಎಸ್ಸೆಸ್ಸೆಲ್ಸಿ, ಪಿಯುಸಿ, ಸಿಇಟಿ, ನೀಟ್, ಜೆಇಇ ಮೈನ್ಸ್‌, ಕಾಮರ್ಸ್‌, ಬ್ಯಾಂಕಿಂಗ್‌ ಪ್ರವೇಶ ಪರೀಕ್ಷೆಗಳ ಉತ್ಕೃಷ್ಟ ಫ‌ಲಿತಾಂಶಕ್ಕಾಗಿ ಗುಣಮಟ್ಟದ ತರಬೇತಿ ಆಯೋಜಿಸುತ್ತಿರುವ ಆಚಾರ್ಯಾಸ್‌ ಏಸ್‌ನಿಂದ ಎಸೆಸೆಲ್ಸಿ, ಪಿಯು ಪರೀಕ್ಷೆಯಲ್ಲಿ ರ್ಯಾಂಕ್‌ ಗಳಿಸಿದ ಆಚಾರ್ಯಾಸ್‌ ಏಸ್‌ ಸಂಸ್ಥೆಯ ವಿದ್ಯಾರ್ಥಿಗಳನ್ನು ‘ಆಚಾರ್ಯ ಪುರಸ್ಕಾರ’ ನೀಡಿ ಸಮ್ಮಾನಿಸಲಾಯಿತು. ಏಸ್‌ ಸಂಸ್ಥೆಯಲ್ಲಿ ತರಬೇತಿ ಪಡೆದು ಎಸ್ಸೆಸ್ಸೆಲ್ಸಿಯಲ್ಲಿ ರಾಜ್ಯಕ್ಕೆ 4ನೇ ರ್ಯಾಂಕ್‌ ಪಡೆದ ಸುಮಂತ್‌ ಕಾರಂತ, ದ್ವಿತೀಯ ಪಿಯುಸಿಯಲ್ಲಿ ರಾಜ್ಯಕ್ಕೆ 10ನೇ ರ್ಯಾಂಕ್‌ ಪಡೆದ ಆದಿತ್ಯ ಆರ್‌., ಗರಿಷ್ಠ ಅಂಕ ಗಳಿಸಿದ […]

ಎಸ್ಸೆಸ್ಸೆಲ್ಸಿ ಮರು ಮೌಲ್ಯಮಾಪನ, ಆಳ್ವಾಸ್ ನ ಸುಜ್ಞಾನ್ ಆರ್. ಶೆಟ್ಟಿ ರಾಜ್ಯಕ್ಕೆ ಪ್ರಥಮ

ಮೂಡುಬಿದಿರೆ: ಎಸ್ಸೆಸ್ಸೆಲ್ಸಿ ಪರೀಕ್ಷೆಯ ಮೌಲ್ಯಮಾಪಕರ ಎಡವಟ್ಟಿನಿಂದ ಕಡಿಮೆ ಅಂಕ ಪಡೆದಿದ್ದ ಕರಾವಳಿಯ ಮತ್ತೊಬ್ಬ ಬಾಲಕ ಮರುಮೌಲ್ಯ ಮಾಪನದಲ್ಲಿ ಗರಿಷ್ಠ ಅಂಕ ಪಡೆದಿದ್ದು, ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದುಕೊಂಡಿದ್ದಾರೆ. ಮೂಡಬಿದಿರೆಯ ಆಳ್ವಾಸ್ ಕಾಲೇಜಿನ ವಿದ್ಯಾರ್ಥಿ ಸುಜ್ಞಾನ್ ಆರ್. ಶೆಟ್ಟಿ ಮರುಮೌಲ್ಯಮಾಪನದಲ್ಲಿ 625ರಲ್ಲಿ 625 ಅಂಕಗಳನ್ನು ಪಡೆದು ರಾಜ್ಯಕ್ಕೆ ಮೊದಲ ಸ್ಥಾನಿಯಾಗಿ ಮೂಡಿಬಂದಿದ್ದಾನೆ. ಮೂಡುಬಿದಿರೆಯ ಅರತಿ ಹಾಗೂ ರಮೇಶ್ ಶೆಟ್ಟಿ ದಂಪತಿಯ ಪುತ್ರನಾಗಿರುವ ಸುಜ್ಞಾನ್ ಆರ್. ಶೆಟ್ಟಿ ಅವರನ್ನು ಆಳ್ವಾಸ್ ಸಂಸ್ಥೆಯ ಮುಖ್ಯಸ್ಥ ಮೋಹನ್ ಆಳ್ವ ಅಭಿನಂದಿಸಿದ್ದಾರೆ.