ದ್ವಿತೀಯ ಪಿಯುಸಿ ಪರೀಕ್ಷೆ: ಉಡುಪಿಯ ಅಭಿಜ್ಞಾ ರಾವ್ ರಾಜ್ಯಕ್ಕೆ ಪ್ರಥಮ
ಉಡುಪಿ: ಇಲ್ಲಿನ ವಿದ್ಯೋದಯ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿ ಉಡುಪಿಯ ಅಭಿಜ್ಞಾ ರಾವ್ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ 596 (ಶೇ. 99.33) ಅಂಕಗಳನ್ನು ಪಡೆದು ರಾಜ್ಯಕ್ಕೆ ಟಾಪರ್ ಆಗಿದ್ದಾರೆ. ಅವರು ಭೌತಶಾಸ್ತ್ರ, ಗಣಿತ, ರಸಾಯನಶಾಸ್ತ್ರ, ಸಂಸ್ಕೃತ, ಕಂಪ್ಯೂಟರ್ ಸೈನ್ಸ್ ನಲ್ಲಿ ತಲಾ 100 ಮತ್ತು ಇಂಗ್ಲಿಷ್ ನಲ್ಲಿ 96 ಅಂಕ ಗಳಿಸಿದ್ದಾರೆ. ಅಭಿಜ್ಞಾ ಎಸ್ಎಸ್ಎಲ್ ಸಿ ಪರೀಕ್ಷೆಯಲ್ಲೂ ಶೇ.99.8 ಅಂಕ ಗಳಿಸುವ ಮೂಲಕ ರಾಜ್ಯಕ್ಕೆ ದ್ವಿತೀಯ ಸ್ಥಾನ ಪಡೆದುಕೊಂಡಿದ್ದರು.