ಎ.8-11: ಮಂದಾರ ಸಾಂಸ್ಕೃತಿಕ ಹಾಗೂ ಸೇವಾ ಸಂಘಟನೆ ಇವರ ವತಿಯಿಂದ ‘ರಂಗೋತ್ಸವ’ ಕಾರ್ಯಕ್ರಮ

ಬ್ರಹ್ಮಾವರ: ಮಂದಾರ(ರಿ.) ಸಾಂಸ್ಕೃತಿಕ ಹಾಗೂ ಸೇವಾ ಸಂಘಟನೆ ಬೈಕಾಡಿ-ಗಾಂಧಿನಗರ ಇವರು ಆಯೋಜಿಸಿರುವ “ರಂಗೋತ್ಸವ” ಕಾರ್ಯಕ್ರಮವು ನಾಲ್ಕು ದಿನಗಳ ಕಾಲ ಎಸ್.ಎಮ್.ಎಸ್ ಪದವಿ ಪೂರ್ವ ಕಾಲೇಜಿನ ಮಕ್ಕಳ ಮಂಟಪದಲ್ಲಿ ನಡೆಯಲಿದೆ. ‘ನಾದ ಮಣಿನಾಲ್ಕೂರ’ ಅವರ ಅರಿವಿನ ಹಾಡುಗಳೊಂದಿಗೆ ಎ.8 ರಂದು ಸಂಜೆ 6:30 ಕ್ಕೆ ಕಾರ್ಯಕ್ರಮವು ಉದ್ಘಾಟನೆಗೊಳ್ಳಲಿದ್ದು, ಮಂದಾರ ತಂಡದ ಕಲಾವಿದರು ಪ್ರಸ್ತುತಪಡಿಸುವ ಜಿ.ಎಸ್.ಭಟ್ಟ ಸಾಗರ ಅವರ ರಚನೆಯ ರೋಹಿತ್.ಎಸ್ ಬೈಕಾಡಿ ನಿರ್ದೇಶಿಸಿರುವ “ಕೊಳ್ಳಿ” ನಾಟಕವು ಪ್ರದರ್ಶನಗೊಳ್ಳಲಿದೆ. ಎ.9 ರಂದು ಅರೆಹೊಳೆ ಪ್ರತಿಷ್ಠಾನ ಇವರು ಪ್ರಸ್ತುತ ಪಡಿಸುವ ರೋಹಿತ್ […]