ನವರಾತ್ರಿಯ ನವದಿನವೂ ಸೀರೆ ಉಟ್ಟ ನೀರೆಯಿಂದ ಸೀರೆಗೊಪ್ಪುವ ರಂಗೋಲಿ!! ಇದು ಕಲಾವಲ್ಲಭೆಯ ಕೈ ಚಳಕ
ಇದು ಸೀರೆಯೋ ಅಥವಾ ರಂಗೋಲಿಯೋ ಎಂದು ಕಣ್ಣುಜ್ಜಿಕೊಂಡು ನೋಡುವಷ್ಟು ಸುಂದರವಾಗಿ ರಂಗೋಲಿ ಹಾಕುವ ಕಲಾವಲ್ಲಭೆ ವಿದ್ಯಾ ಮಂಗೇಶ್ ಪೈ. ದಸರಾದ ಒಂಭತ್ತೂ ದಿನಗಳಲ್ಲಿ ಆಯಾ ದಿನದ ಬಣ್ಣದ ಸೀರೆಯುಟ್ಟು, ತಮ್ಮ ಸೀರೆಯದ್ದೇ ಡಿಸೈನಿನ ರಂಗೋಲಿ ಹಾಕಿ ಪ್ರತಿಯೊಬ್ಬರೂ ಮೂಗಿನ ಮೇಲೆ ಬೆರಳಿಟ್ಟುಕೊಳ್ಳುವಂತೆ ಮಾಡುತ್ತಾರೆ. ರಂಗೋಲಿ ಕಲೆಯಲ್ಲಿ ಇವರದ್ದು ಎತ್ತಿದ ಕೈ. ಪ್ರಧಾನಿ ನರೇಂದ್ರ ಮೋದಿಯವರ ರಂಗೋಲಿ ಚಿತ್ರವನ್ನೂ ಬಿಡಿಸಿ ಸೈ ಎನಿಸಿಕೊಂಡಿದ್ದಾರೆ.