ಹಿರಿಯ ವಕೀಲ ‌ರಾಮ್ ಜೇಠ್ಮಲಾನಿ‌ ಇನ್ನಿಲ್ಲ

ದೆಹಲಿ: ಕಳೆದ ಕೆಲ ಸಮಯದಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಸುಪ್ರೀಂ‌ ಕೋರ್ಟ್ನ ಹಿರಿಯ ವಕೀಲ‌ ರಾಮ್ ಜೇಠ್ಮಲಾನಿ (96)ಅವರು ಭಾನುವಾರ ಬೆಳಗ್ಗೆ ನಿಧನ ಹೊಂದಿದ್ದಾರೆ. ಸುಪ್ರೀಂ ಕೋರ್ಟಿನ ಹಿರಿಯ ವಕೀಲರಾಗಿದ್ದ ಇವರು ದೇಶದ ಪ್ರಸಿದ್ದ ಕ್ರಿಮಿನಲ್ ವಕೀಲರಲ್ಲಿ ಒಬ್ಬರಾಗಿದ್ದರು. ಬಿಜೆಪಿಯಿಂದ ರಾಜ್ಯಸಭಾ ಸಂಸದರೂ ಆಗಿದ್ದರು. ಕಳೆದ ಎರಡು ವಾರಗಳಿಂದ ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದರು.