ರಾಮೇಶ್ವರಂ ಕೆಫೆ ಸ್ಫೋಟದ ಶಂಕಿತನ ಹೊಸ ಚಿತ್ರ ಬಿಡುಗಡೆ: ಪತ್ತೆ ಹಚ್ಚಲು ನಾಗರಿಕರ ಸಹಕಾರ ಕೋರಿದ ತನಿಖಾ ಸಂಸ್ಥೆ
ಬೆಂಗಳೂರು: ರಾಮೇಶ್ವರಂ ಕೆಫೆ ಸ್ಫೋಟ (Rameshwarma Cafe Blast) ಪ್ರಕರಣದ ತನಿಖೆ ನಡೆಸುತ್ತಿರುವ ರಾಷ್ಟ್ರೀಯ ತನಿಖಾ ಸಂಸ್ಥೆ (NIA), ಅಪರಾಧಕ್ಕೆ ಸಂಬಂಧಿಸಿದ ಶಂಕಿತನ ಹೊಸ ಚಿತ್ರಗಳನ್ನು ಬಿಡುಗಡೆ ಮಾಡಿದೆ ಮತ್ತು ಆತನನ್ನು ಪತ್ತೆಹಚ್ಚಲು ಸಾರ್ವಜನಿಕ ಸಹಕಾರವನ್ನು ಕೋರಿದೆ. ಮಾಹಿತಿದಾರರ ವಿವರಗಳನ್ನು ಗೌಪ್ಯವಾಗಿಡಲಾಗುವುದು ಎಂದು ತನಿಖಾ ಸಂಸ್ಥೆ ಹೇಳಿದೆ. “ರಾಮೇಶ್ವರಂ ಕೆಫೆ ಸ್ಫೋಟಕ್ಕೆ ಸಂಬಂಧಿಸಿದ ಶಂಕಿತನನ್ನು ಗುರುತಿಸಲುೀನ್.ಐ.ಎ ನಾಗರಿಕರ ಸಹಕಾರವನ್ನು ಕೋರಿದೆ. ಯಾವುದೇ ಮಾಹಿತಿಯೊಂದಿಗೆ 08029510900, 8904241100 ಕರೆ ಮಾಡಿ ಅಥವಾ[email protected] ಮಾಡಿ. ನಿಮ್ಮ ಗುರುತು ಗೌಪ್ಯವಾಗಿ ಇಡಲಾಗುವುದು” […]
ರಾಮೇಶ್ವರಂ ಕೆಫೆ ಸ್ಪೋಟದ ಶಂಕಿತ ಉಗ್ರನ ಊಹಾತ್ಮಕ ರೇಖಾಚಿತ್ರ ಬಿಡುಗಡೆ: ಮಾಹಿತಿ ಕೊಟ್ಟವರಿಗೆ 10 ಲಕ್ಷ ರೂಪಾಯಿ ಬಹುಮಾನ
ಬೆಂಗಳೂರು: ರಾಮೇಶ್ವರಂ ಕೆಫೆ ಸ್ಪೋಟದ( Rameshwaram Cafe Blast) ಶಂಕಿತ ಉಗ್ರನ ಹುಡುಕಾಟಕ್ಕೆ ಬಲೆ ಬೀಸಲಾಗಿದೆ. ಆತನ ಮುಖ ಚಹರೆ ಸ್ಪಷ್ಟವಾಗಿ ಗೋಚರಿಸದ ಕಾರಣ ಪತ್ತೆ ಕಷ್ಟವಾಗಿದೆ. ಶಂಕಿತ ಉಗ್ರ ಎಲ್ಲಿಯೂ ತನ್ನ ಮುಖ ಕಾಣದಂತೆ ಟೋಪಿ ಹಾಗೂ ಮಾಸ್ಕ್ ಬಳಸಿದ್ದಾನೆ. ಸ್ಪೋಟದ ಮುಂಚೆ ಹಾಗೂ ಸ್ಪೋಟದ ನಂತರ ಎಲ್ಲೆಲ್ಲಿ ಓಡಾಡಿದ್ದರೂ ಯಾವ ಸಿಸಿಟಿವಿಯಲ್ಲಿಯೂ ಆತನ ಮುಖ ಸ್ಪಷ್ಟವಾಗಿ ಕಂಡು ಬಂದಿಲ್ಲ. ಶಂಕಿತನ ಅರ್ಧ ಮುಖ ಕಾಣುವ ಸಿಸಿಟಿವಿಯ ಫೋಟೊವನ್ನು NIA ಬಿಡುಗಡೆ ಮಾಡಿದ್ದು, ಹುಡುಕಿಕೊಟ್ಟವರಿಗೆ 10 […]