ರಾಮಮಂದಿರ ನಿರ್ಮಾಣದ ಭೂಮಿಪೂಜೆಗೆ ಸಕಲ ಸಿದ್ಧತೆ: ಕಣ್ಮನ ಸೆಳೆಯತ್ತಿದೆ ಅಯೋದ್ಯೆ

ನವದೆಹಲಿ: ಬುಧವಾರ ರಾಮಮಂದಿರ ನಿರ್ಮಾಣಕ್ಕೆ ಭೂಮಿಪೂಜೆ ನಡೆಯಲಿದ್ದು, ಅಯೋಧ್ಯೆಯಲ್ಲಿ ಭೂಮಿಪೂಜೆಗೆ ಸಕಲ ಸಿದ್ದತೆ ಪೂರ್ಣಗೊಂಡಿದೆ. ರಾಮಮಂದಿರ ಸಂಪರ್ಕಿಸುವ ಅಯೋಧ್ಯೆಯ ಎಲ್ಲ ಪ್ರಮುಖ ರಸ್ತೆಗಳ ಬದಿಯ ಕಟ್ಟಡ, ಸೇತುವೆಯ ಕಂಬಗಳು ವಿವಿಧ ಬಣ್ಣಗಳಿಂದ ಸಿಂಗಾರಗೊಂಡಿದೆ. ವಾರಾಣಸಿಯಿಂದ ಕರೆಸಿಕೊಳ್ಳಲಾಗಿರುವ 21 ಪುರೋಹಿತರಿಂದ ಧಾರ್ಮಿಕ ಪೂಜಾ ವಿಧಿವಿಧಾನಗಳು ನಡೆಯುತ್ತಿದೆ. ಅಯೋಧ್ಯೆಯ ಎಲ್ಲ ಪ್ರಮುಖ ದೇವಾಲಯಗಳಿಗೆ ದೀಪಾಲಂಕಾರ ಮಾಡಲಾಗಿದೆ. ವಿಶೇಷ ಉಡುಪಿನ ಸಿಂಗಾರ: ರಾಮಲಲ್ಲಾನಿಗೆ ನವರತ್ನಗಳಿಂದ ವಿಶೇಷವಾಗಿ ನಾಲ್ಕು ಉಡುಪಗಳನ್ನು ತಯಾರಿಸಲಾಗಿದ್ದು, ಅವುಗಳನ್ನು ತಾತ್ಕಾಲಿಕ ರಾಮಮಂದಿರದ ಅರ್ಚಕರಿಗೆ ಹಸ್ತಾಂತರಿಸಲಾಗಿದೆ. ಸೋಮವಾರ ಬಿಳಿ, ಮಂಗಳವಾರ ಕೆಂಪು, […]