ಕುಂಜಾಲು ನಿವಾಸಿ ರಾಮಚಂದ್ರ ರಾಯರ ಮಾದರಿ ಗೋಸೇವೆ; 13 ವರ್ಷದಿಂದ ಲಾರಿ ಒಣಹುಲ್ಲು ಗೋಶಾಲೆಗೆ ಹಸ್ತಾಂತರ

ಉಡುಪಿ: ಬ್ರಹ್ಮಾವರ ತಾಲೂಕಿನ ನೀಲಾವರ ಗ್ರಾಮದ  ಕುಂಜಾಲು ನಿವಾಸಿ ರಾಮಚಂದ್ರ ರಾವ್ ಎಂಬವರು ಕಳೆದ ಹದಿಮೂರು ವರ್ಷಗಳಿಂದ ಒಂದು ಲಾರಿ ಲೋಡ್ ಒಣ ಹುಲ್ಲನ್ನು ಖರೀದಿಸಿ ನೀಲಾವರ ಗೋಶಾಲೆಗೆ ಸದ್ದಿಲ್ಲದೇ ಒಪ್ಪಿಸುತ್ತಿರುವ ಮಾದರಿ ಕಾರ್ಯದ ಬಗ್ಗೆ ಗೋಶಾಲೆಯ ಅಧ್ವರ್ಯು ಪೇಜಾವರ ಶ್ರೀ ವಿಶ್ವಪ್ರನ್ನತೀರ್ಥ ಶ್ರೀಪಾದರು ಅತೀವ ಸಂತಸ ವ್ಯಕ್ತಪಡಿಸಿದ್ದಾರೆ. ಆರೋಗ್ಯ ಇಲಾಖೆಯ ಮೂರನೇ ದರ್ಜೆಯ ಆರೋಗ್ಯ ಸಹಾಯಕ ಹುದ್ದೆಯ ನಿವೃತ್ತ ನೌಕರ ರಾಮಚಂದ್ರ ರಾವ್  ಅವರು ತನ್ನೂರಿನ‌ಲ್ಲೇ ಈ ಗೋಶಾಲೆ ಇದ್ದರೂ ಒಮ್ಮೆಯೂ ನೋಡಿರಲಿಲ್ಲ .‌ ಒಮ್ಮೆ […]