ಕಿರಿಮಂಜೇಶ್ವರ: ಹುಡುಗಿ ನೀಡಿದ ದೂರಿನ ವಿಚಾರಣೆಗೆ ಠಾಣೆಗೆ ಹೋಗಿದ್ದ ಯುವಕ ಕೊನೆಗೆ ಸಿಕ್ಕಿದ್ದು ಶವವಾಗಿ !
ಕುಂದಾಪುರ: ಯುವತಿಯೊಬ್ಬಳು ನೀಡಿದ ದೂರು ಅರ್ಜಿಯ ಹಿನ್ನೆಲೆ ಯುವಕನೋರ್ವನನ್ನು ವಿಚಾರಣೆಗೆಂದು ಪೊಲೀಸರು ಠಾಣೆಗೆ ಕರೆಸಿ ವಿಚಾರಣೆ ನಡೆಸಿ ಮನೆಗೆ ಕಳುಹಿಸಿದ ಬಳಿಕ ರೈಲ್ವೆ ಹಳಿಯ ಮೇಲೆ ಛಿದ್ರಗೊಂಡ ಸ್ಥಿತಿಯಲ್ಲಿ ಯುವಕನ ಮೃತದೇಹ ಪತ್ತೆಯಾದ ಕಳವಳಕಾರಿ ಘಟನೆ ಬೈಂದೂರು ಪೊಲೀಸ್ ಠಾಣಾ ವ್ಯಾಪ್ತಿಯ ನಾಗೂರಿನಲ್ಲಿ ನಡೆದಿದೆ. ಕಿರಿಮಂಜೇಶ್ವರ ಶಾಲೆಬಾಗಿಲು ನಿವಾಸಿ ರಾಮ ಪೂಜಾರಿ(32) ಸಾವನ್ನಪ್ಪಿದ ದುರ್ದೈವಿ. ಯುವಕನ ಕುಟುಂಬಿಕರು ಆಕ್ರೋಷ ವ್ಯಕ್ತಪಡಿಸಿ ಮಂಗಳವಾರ ಮಧ್ಯಾಹ್ನ ೨ ಗಂಟೆಯವರೆಗೂ ಶವವನ್ನು ರೈಲು ಹಳಿ ಪಕ್ಕವೇ ಇಟ್ಟು ನ್ಯಾಯಕ್ಕಾಗಿ ಪ್ರತಿಭಟನೆ ನಡೆಸಿದ್ದಾರೆ. […]