ರಾಮಮಂದಿರ ಶಿಲಾನ್ಯಾಸದ ಪ್ರಯುಕ್ತ ನರಸಿಂಗೆ ಶ್ರೀ ನರಸಿಂಹ ದೇವಳದಲ್ಲಿ ಸಸಿ ನೆಟ್ಟು ಪರಿಸರ ಜಾಗೃತಿ

ಉಡುಪಿ: ರಾಮಮಂದಿರದ ಶಿಲಾನ್ಯಾಸದ ಪ್ರಯುಕ್ತ  ಅ.5 ರಂದು ನರಸಿಂಗೆ ಶ್ರೀ ನರಸಿಂಹ ದೇವಳದಲ್ಲಿ ಬಿಲ್ವ, ಸೀತಾಫಲ , ಬಾದಾಮಿ, ಅಶೋಕದ ಸಸಿಗಳನ್ನು ನಟ್ಟು ಶ್ರೀರಾಮಚಂದ್ರ ದೇವರ ಧ್ಯಾನ ಮಾಡಲಾಯಿತು. ಮಂದಿರ ನಿರ್ಮಾಣ ಕಾರ್ಯ ಶೀಘ್ರದಲ್ಲಿ ಪೂರ್ಣಗೊಳ್ಳಲಿ ಪ್ರಾರ್ಥಿಸಲಾಯಿತು. ಸಸಿಗಳನ್ನು ನಟ್ಟು ಪರಿಸರ ಮತ್ತು ಆರೋಗ್ಯದ ಬಗ್ಗೆ ಜಾಗೃತಿ ಮೂಡಿಸಲಾಯಿತು.